ಬೆಂಗಳೂರಿನ ಎಂಜಿ ರೋಡ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಕಾದು ಕುಳಿತವರಿಗೆ ಶಾಕ್!
ಹೊಸವರ್ಷವನ್ನ (New Year) ಭರ್ಜರಿಯಾಗಿ ವೆಲ್ಕಂ ಮಾಡಲು ಯುವಕ, ಯುವತಿಯರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಬೆಂಗಳೂರಿನ ಎಂಜಿ ರೋಡ್‌ನಲ್ಲಿ (Bengaluru MG Road) ಕುಣಿದು ಕುಪ್ಪಳಿಸಲು ಯುವ ಸಮೂಹ ಸಜ್ಜಾಗಿದೆ. ಆದ್ರೆ ಡಿಸೆಂಬರ್ 31 ರ ರಾತ್ರಿ ನ್ಯೂಇಯರ್ ಕಿಕ್ಕೇರಿಸದಂತೆ ಸರ್ಕಾರ ಪ್ಲಾನ್ ಮಾಡುತ್ತಿದ್ದು, ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳು ಈಗಾಗಲೇ ಸರಣಿ ಸಭೆ ಮಾಡಿದ್ದಾರೆ.
ಬೆಂಗಳೂರು, (ಡಿಸೆಂಬರ್ 10): ಹೊಸವರ್ಷವನ್ನ (New Year) ಭರ್ಜರಿಯಾಗಿ ವೆಲ್ಕಂ ಮಾಡಲು ಯುವಕ, ಯುವತಿಯರು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಬೆಂಗಳೂರಿನ ಎಂಜಿ ರೋಡ್‌ನಲ್ಲಿ (Bengaluru MG Road) ಕುಣಿದು ಕುಪ್ಪಳಿಸಲು ಯುವ ಸಮೂಹ ಸಜ್ಜಾಗಿದೆ. ಆದ್ರೆ ಡಿಸೆಂಬರ್ 31 ರ ರಾತ್ರಿ ನ್ಯೂಇಯರ್ ಕಿಕ್ಕೇರಿಸದಂತೆ ಸರ್ಕಾರ ಪ್ಲಾನ್ ಮಾಡುತ್ತಿದ್ದು, ಪೊಲೀಸ್ ಹಾಗೂ ಜಿಬಿಎ ಅಧಿಕಾರಿಗಳು ಈಗಾಗಲೇ ಸರಣಿ ಸಭೆ ಮಾಡಿದ್ದಾರೆ. ಸಭೆಯಲ್ಲಿ M.G ರೋಡ್ ನ್ಯೂಇಯರ್ ಆಚರಣೆಗೆ ಅವಕಾಶ ನೀಡದಂತೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಾರಿ ನ್ಯೂ ಇಯರ್ಗೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು, ಚಿನ್ನಸ್ವಾಮಿ ಕಾಲ್ತುಳಿತದಂತಹ ಘಟನೆ ಸಂಭವಿಸೋ ಆತಂಕ ಎದುರಾಗಿದೆ. ಹೀಗಾಗಿ ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಲಿದ್ದು, ಆ ಬಳಿಕ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.

