News9 Global Summit in Germany 1st day Live: ನ್ಯೂಸ್ 9 ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9 ಆಯೋಜಿಸಿರುವ ಮೂರು ದಿನಗಳ ಗ್ಲೋಬಲ್ ಸಮ್ಮಿಟ್ ಇಂದು ಜರ್ಮನಿಯಲ್ಲಿ ಆರಂಭವಾಗಿದೆ. ಬುಂಡೆಸ್ಲೀಗಾ ಕ್ಲಬ್ VfB ಸ್ಟಟ್ ಗಾರ್ಟ್ ಸಹಯೋಗದಲ್ಲಿ ನಡೆಯಲಿರುವ ನ್ಯೂಸ್ 9 ಗ್ಲೋಬಲ್ ಸಮ್ಮಿಟ್ , ಟಿವಿ9 ನೆಟ್ ವರ್ಕ್ ನ ಮಹತ್ವದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮ್ಮಿಟ್ ನ ಜಾಗತಿಕ ರೂಪ.. ಈ ಗ್ಲೋಬಲ್ ಸಮ್ಮಿಟ್ ನ ಗುರಿಯೇ ಭಾರತದ ಅಭಿವೃದ್ಧಿ ಗಾಥೆಯನ್ನ ವಿಶ್ವಕ್ಕೆ ತಿಳಿಸುವುದು. ಇನ್ನು ಗ್ಲೋಬಲ್ ಸಮ್ಮಿಟ್ನ ಮೊದಲ ದಿನದ ನೇರಪ್ರಸಾರ ಇಲ್ಲಿದೆ ನೋಡಿ.
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9 ಆಯೋಜಿಸಿರುವ ಮೂರು ದಿನಗಳ ಗ್ಲೋಬಲ್ ಸಮ್ಮಿಟ್ ಇಂದು ಜರ್ಮನಿಯಲ್ಲಿ ಆರಂಭವಾಗಿದೆ. ಇಂದು, ನಾಳೆ(ನವೆಂಬರ್ 21, 22 ಮತ್ತು ಮತ್ತು) ಮತ್ತು ನಾಡಿದ್ದು ಮೂರು ದಿನಗಳ ಕಾಲ ಜಾಗತಿಕ ಸಮಾವೇಶ ಜರ್ಮನಿಯ ಸ್ಟುಟ್ ಗಾಟ್ ನಗರದಲ್ಲಿ ನಡೆಯಲಿದೆ. ಟಿವಿ9 ನೆಟ್ ವರ್ಕ್ ಎಂಡಿ ಮತ್ತು ಸಿಇಒ ಬರುನ್ ದಾಸ್ ಅವರ ಚಿಂತನೆಯ ಈ ನ್ಯೂಸ್ 9 ಗ್ಲೋಬಲ್ ಸಮ್ಮಿಟ್, ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗಿದೆ. ನ್ಯೂಸ್ 9 ಗ್ಲೋಬಲ್ ಸಮ್ಮಿಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಭಾಷಣ ಮಾಡಲಿದ್ದು, ಭಾರತ ಮತ್ತು ಜರ್ಮನಿ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನ ಬಲಪಡಿಸುವ ಬಗ್ಗೆ ಮಾತನಾಡಲಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಪ್ರಮುಖರು ಈ ಸಮಾವೇಶದಲ್ಲಿ ಚಿಂತನ ಮಂಥನ ನಡೆಸಲಿದ್ದಾರೆ. ರಾಜಕೀಯ, ಆರ್ಥಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ತಜ್ಞರು, ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಆಲೋಚನೆಗಳನ್ನ ಹಂಚಿಕೊಳ್ಳಲಿದ್ದಾರೆ. ತಂತ್ರಜ್ಞಾನ, ಉದ್ಯಮ ವಲಯ, ವಾತಾವರಣ ಬದಲಾವಣೆ ಸೇರಿದಂತೆ ಭಾರತ ಮತ್ತು ಜರ್ಮನಿ ಸೇರಿದಂತೆ ವಿಶ್ವಕ್ಕೆ ಪ್ರಮುಖವಾದ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆಗಳು ನಡೆಯಲಿವೆ. ಇನ್ನು 2 ದಿನಗಳ ಗ್ಲೋಬಲ್ ಸಮ್ಮಿಟ್ನ ಮೊದಲ ದಿನದ ನೇರಪ್ರಸಾರ ಇಲ್ಲಿದೆ ನೋಡಿ.