ಕೇಂದ್ರದ ಮಾನದಂಡಗಳ ಕಾರಣ ಗ್ಯಾರಂಟಿ ಯೋಜನೆ ನಿಲ್ಲಿಸಬೇಕಾಯಿತು ಅಂತ ರಾಜ್ಯ ಸರ್ಕಾರ ಹೇಳಬಾರದು: ಪ್ರಲ್ಹಾದ್ ಜೋಶಿ
ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ಅಗಲೇಬೇಕಿದೆ, ಯಾಕೆಂದರೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ ಹಲವಾರು ಕಾರಣಗಳಿಂದಾಗಿ 13 ಕೋಟಿಗೂ ಹೆಚ್ಚು ಜನ ಕಡುಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ, ತನಗೆ ಲಭ್ಯವಾಗುತ್ತಿರುವ ದೂರುಗಳ ಪ್ರಕಾರ ಕರ್ನಾಟಕದಲ್ಲಿ ಸ್ಥಿತಿವಂತರು ಬಿಪಿಎಲ್ ಶ್ರೇಣಿಯಲ್ಲೇ ಉಳಿದು ಕಡುಬಡುವರು ಹೊರಬೀಳುತ್ತಿದ್ದಾರೆ, ಹಾಗಾಗಬಾರದು ಎಂದು ಜೋಶಿ ಹೇಳಿದರು.
ದೆಹಲಿ: ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಭರದಲ್ಲಿ ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರ ಕಡೆ ಬೊಟ್ಟು ಮಾಡಿ ತೋರಿಸುವುದು ಬೇಡ, ಕೇಂದ್ರ ಮಾನದಂಡಗಳನ್ನು ಜಾರಿ ಮಾಡಿ ಬಹಳ ದಿನಗಳಾಗಿದೆ, ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯವಾದಂತಿದೆ, ಆದರೆ ಕೇಂದ್ರ ಸರ್ಕಾರದ ಮಾನದಂಡಗಳಿಂದಾಗಿ ತಾನು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಯಿತು ಅಂತ ರಾಜ್ಯ ಸರ್ಕಾರ ಹೇಳುವ ಸ್ಥಿತಿ ತಂದುಕೊಳ್ಳಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಈ ವಿಷಯದಲ್ಲಿ ತಾನು ರಾಜಕೀಯ ಮಾಡೋದಿಲ್ಲ, ತನ್ನ ಮೂಲ ಕಾಂಗ್ರೆಸ್ ಅಲ್ಲ, ರಾಜಕೀಯ ಬದುಕಿನ ಆರಂಭದಿಂದ ಬಿಜೆಪಿ ಸಂಸ್ಕೃತಿಯಲ್ಲಿ ಬೆಳೆದವನು ಎಂದು ಜೋಶಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ ಎಂಬುದು ಕಾಂಗ್ರೆಸ್ಗೆ ಈಗ ಗೊತ್ತಾಗಿದೆ; ಪ್ರಲ್ಹಾದ್ ಜೋಶಿ ಲೇವಡಿ
Latest Videos