AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಶಾಸಕನಿಗೆ ಅನುದಾನ ನಿಲ್ಲಿಸಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ: ಸಿದ್ದರಾಮಯ್ಯ

ಯಾವುದೇ ಶಾಸಕನಿಗೆ ಅನುದಾನ ನಿಲ್ಲಿಸಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 21, 2024 | 7:06 PM

ಸರ್ಕಾರ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಯ ಪರಿಷ್ಕರಣೆ ನಡೆದಿಲ್ಲ, ಶಕ್ತಿ ಯೋಜನೆಯನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ, ಶಿವಕುಮಾರ್ ಹೇಳಿದ್ದನ್ನು ಬಿಟ್ಟು ತಾನು ಹೇಳುವುದನ್ನು ಕೇಳಿ ಎಂದ ಸಿದ್ದರಾಮಯ್ಯ, ತಮ್ಮ ಹೇಳಿಕೆಯ ಬಗ್ಗೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ ಎಂದರು.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ತಮ್ಮ ನಿಗದಿತ ಕಾರ್ಯಕ್ರಮಗಳು ಮುಗಿದ ನಂತರ ಮಾಧ್ಯಮದವರೊಡನೆ ಮಾತಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಎಲ್ಲ ಶಾಸಕರಿಗೆ ಅನುದಾನ ನೀಡಲಾಗಿದೆ, ಅಭಿವೃದ್ಧಿ ಕಾರ್ಯಗಳು ಎಲ್ಲ ಕಡೆ ನಡೆಯುತ್ತಿವೆ, ಬಜೆಟ್​ನಲ್ಲಿ ನಿಗದಿಪಡಿಸಿದ ಮೊತ್ತವನ್ನು ಮೀರಿ ಯಾವುದಾದರೂ ಶಾಸಕ ವಿಶೇಷ ಅನುದಾನ ಕೇಳಿದ್ದರೆ ಅದನ್ನು ಕೊಟ್ಟಿಲ್ಲ ಎಂದರು. ಕಾಂಗ್ರೆಸ್​ಗಿಂತ ಮೊದಲು ಮೂರು ವರ್ಷ ಹತ್ತು ತಿಂಗಳು ಅಧಿಕಾರ ನಡೆಸಿದ ಬಿಜೆಪಿ ತನ್ನ ಪ್ರಣಾಳಿಕೆಯ ಶೇಕಡ 10ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ, ಕಂದಾಯ ಸಚಿವರಾಗಿದ್ದ ಆರ್ ಆಶೋಕ ರೈತರ ಸಾಲ ಮಾಡುತ್ತೇವೆಂದು ಹೇಳಿ ಮಾಡಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಡವರ ಅನ್ನ ಕಸಿಯುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪ ತಟ್ಟದಿರದು: ಬಸವರಾಜ ಬೊಮ್ಮಾಯಿ

Published on: Nov 21, 2024 07:06 PM