ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ

ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ

ಸುಷ್ಮಾ ಚಕ್ರೆ
|

Updated on:Nov 21, 2024 | 10:47 PM

3 ದಿನಗಳ ನ್ಯೂಸ್ 9 ಜಾಗತಿಕ ಶೃಂಗಸಭೆಯು ಜರ್ಮನಿಯ ಸ್ಟಟ್‌ಗಾರ್ಟ್ ನಗರದಲ್ಲಿ ಇಂದಿನಿಂದ ಪ್ರಾರಂಭವಾಗಿದೆ. ನವೆಂಬರ್ 23ರವರೆಗೆ ನಡೆಯುವ ಬಹು ನಿರೀಕ್ಷಿತ ಶೃಂಗಸಭೆಯು ನೀತಿ ನಿರೂಪಕರು, ನವೋದ್ಯಮಿಗಳು, ಉದ್ಯಮದ ಪ್ರಮುಖರ ಜೊತೆ ಚರ್ಚಿಸಲು ವೇದಿಕೆ ಕಲ್ಪಿಸಲಿದೆ.

ದೇಶದ ನಂಬರ್ ಒನ್ ನ್ಯೂಸ್ ನೆಟ್‌ವರ್ಕ್ ಟಿವಿ9ನ ನ್ಯೂಸ್9 ಗ್ಲೋಬಲ್ ಶೃಂಗಸಭೆಯು ಜರ್ಮನಿಯಲ್ಲಿ ಅದ್ದೂರಿಯಾಗಿ ಪ್ರಾರಂಭವಾಯಿತು. ಈ ಜಾಗತಿಕ ಶೃಂಗಸಭೆಯಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಸಂಬಂಧವನ್ನು ಬಲಪಡಿಸುವುದರ ಜೊತೆಗೆ ಎರಡೂ ದೇಶಗಳ ಸುಸ್ಥಿರ ಮತ್ತು ಶಾಶ್ವತ ಅಭಿವೃದ್ಧಿಯ ಮಾರ್ಗಸೂಚಿಯನ್ನು ಚರ್ಚಿಸಲಾಗುವುದು. ಎರಡೂ ದೇಶಗಳ ರಾಜಕಾರಣಿಗಳು, ಸೆಲೆಬ್ರಿಟಿಗಳು, ಶ್ರೇಷ್ಠ ಕ್ರೀಡಾಪಟುಗಳು ಮತ್ತು ಕಾರ್ಪೊರೇಟ್ ನಾಯಕರು ಈ ಚಿಂತನ-ಮಂಥನ ಅಧಿವೇಶನದ ಭಾಗವಾಗಲಿದ್ದಾರೆ. ಜಾಗತಿಕ ಶೃಂಗಸಭೆಯ ಜರ್ಮನ್ ಆವೃತ್ತಿಯ ಪ್ರಮುಖ ಆಕರ್ಷಣೆ ಪ್ರಧಾನಿ ನರೇಂದ್ರ ಮೋದಿ. ಇಂದಿನಿಂದ 3 ದಿನಗಳವರೆಗೆ ಈ ಶೃಂಗಸಭೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 21, 2024 10:47 PM