ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬಿಜೆಪಿ ಶಾಸಕನ ವಿರುದ್ಧ ಟೀಕೆ ಮಾಡಿದ್ದು ಅಪ್ರಬುದ್ಧತೆ!

ಸೋಮಶೇಖರ್ ಪಕ್ಷಗಳನ್ನು ಬದಲಾಯಿಸಿದರೂ, ಯಶವಂತಪುರದಿಂದ ಸತತವಾಗಿ ಗೆದ್ದು ಬರುತ್ತಿದ್ದಾರೆ ಮತ್ತು ಅದಕ್ಕೂ ಮುಖ್ಯ ಸಂಗತಿಯೆಂದರೆ, ಬಿಜೆಪಿ ನಾಯಕರೇ ಅವರ ವಿರುದ್ಧ ಯಾವುದೇ ಕಾಮೆಂಟ್ ಮಾಡುತ್ತಿಲ್ಲ. ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ ಈಗಷ್ಟೇ ಆಗಿದ್ದರೂ ನಿಖಿಲ್ ಬಿಜೆಪಿ ಶಾಸಕನ ಬಗ್ಗೆ ಕಾಮೆಂಟ್ ಮಾಡುತ್ತಾರೆ! ಬಿಜೆಪಿ ಧುರೀಣರಿಗೆ ಇದು ಸರಿಯೆನಿಸಲಿಕ್ಕಿಲ್ಲ.

ಬೆಂಗಳೂರು: ರಾಜಕಾರಣದಲ್ಲಿ ಪ್ರಬುದ್ಧತೆ ದೊಡ್ಡ ರೋಲ್ ಪ್ಲೇ ಮಾಡುತ್ತದೆ ಅನ್ನೋದು ಗೊತ್ತಿರುವ ವಿಚಾರವೇ. ನಿಖಿಲ್ ಕುಮಾರಸ್ವಾಮಿಯನ್ನು (Nikhil Kumaraswamy) ರಾಜ್ಯ ರಾಜಕಾರಣದಲ್ಲಿ ಲಾಂಚ್ ಮಾಡಲು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಕಳೆದ 5-6 ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Polls) ನಿಖಿಲ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ನಿಚ್ಚಳವಾಗಿ ಗೊತ್ತಾಗುತ್ತಿದೆ. ಆದರೆ ಅವರಲ್ಲಿ ಪ್ರಬುದ್ಧತೆ ಇನ್ನೂ ಬರಬೇಕಿದೆ ಅನ್ನೋದು ಮಾತುಗಳಿಂದ ಗೊತ್ತಾಗುತ್ತದೆ. ವಿಧಾನ ಪರಿಷತ್ ಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಉಮೇದುವಾರ ಪುಟ್ಟಣ್ಣ ಪರವಾಗಿ ಪ್ರಚಾರ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ನಿಖಿಲ್ ಗೆ ಮಾಧ್ಯದವರು ಕೇಳಿದಾಗ, ಸೋಮಶೇಖರ್ ಅವರನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಅನ್ನುತ್ತಾರೆ. ಅವರ ಮಾತು ರಾಜಕೀಯ ಜ್ಞಾನದ ಕೊರೆತೆಯನ್ನು ಸೂಚಿಸುತ್ತದೆ. ಸೋಮಶೇಖರ್ ಪಕ್ಷಗಳನ್ನು ಬದಲಾಯಿಸಿದರೂ, ಯಶವಂತಪುರದಿಂದ ಸತತವಾಗಿ ಗೆದ್ದು ಬರುತ್ತಿದ್ದಾರೆ ಮತ್ತು ಅದಕ್ಕೂ ಮುಖ್ಯ ಸಂಗತಿಯೆಂದರೆ, ಬಿಜೆಪಿ ನಾಯಕರೇ ಅವರ ವಿರುದ್ಧ ಯಾವುದೇ ಕಾಮೆಂಟ್ ಮಾಡುತ್ತಿಲ್ಲ. ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ ಈಗಷ್ಟೇ ಆಗಿದ್ದರೂ ನಿಖಿಲ್ ಬಿಜೆಪಿ ಶಾಸಕನ ಬಗ್ಗೆ ಕಾಮೆಂಟ್ ಮಾಡುತ್ತಾರೆ! ಬಿಜೆಪಿ ಧುರೀಣರಿಗೆ ಇದು ಸರಿಯೆನಿಸಲಿಕ್ಕಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿಅ ಇಲ್ಲಿ ಕ್ಲಿಕ್ ಮಾಡಿ

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us