ಅಸೆಂಬ್ಲಿ ಉಪ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಫರ್ದಿಸುವ ಅಸೆ ನಿಖಿಲ್ ಕುಮಾರಸ್ವಾಮಿಗಿದೆಯೇ?

|

Updated on: Jul 11, 2024 | 6:25 PM

ಹೆಚ್ ಡಿ ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿರುವುದರಿಂದ ಜೆಡಿಎಸ್ ರಾಜ್ಯಾಧ್ಯಕ್ಷನ ಸ್ಥಾನವನ್ನು ಬೇರೆಯವರಿಗೆ ವಹಿಸಬೇಕಿದೆ. ದೇವೇಗೌಡರು ತಮ್ಮ ಕುಟುಂಬದವರೇ ಅಗಲಿ ಅನ್ನೋದು ನಿಶ್ಚಿತ. ಹೆಚ್ ಡಿ ರೇವಣ್ಣ ಡಿಸ್ಟರ್ಬ್ಡ್ ಆಗಿದ್ದಾರೆ, ಪ್ರಜ್ವಲ್ ಮತ್ತು ಸೂರಜ್ ಜೈಲಲ್ಲಿರುವುದರಿಂದ ರೂಲ್ಡ್ ಔಟ್. ಉಳಿಯೋದು ನಿಖಿಲ್ ಕುಮಾರಸ್ವಾಮಿ ತಾನೇ?

ರಾಮನಗರ: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಬೇಕು ಇಲ್ಲವೇ ಚನ್ನಪಟ್ಟಣದಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗುವ ಅಕಾಂಕ್ಷೆಯನ್ನು ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಇಟ್ಟುಕೊಂಡಿದ್ದಾರೆಯೇ? ಅವರ ಮಾತುಗಳನ್ನು ಕೇಳಿದವರಿಗೆ ಹಾಗನ್ನಿಸದಿರದು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಿಖಿಲ್, ಚನ್ನಪಟ್ಟಣದಿಂದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಸ್ಪರ್ಧಿಸುವ ಬಲವಾದ ಇಚ್ಛೆ ವ್ಯಕ್ತಪಡಿಸಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ ನಿಖಿಲ್, ಅದನ್ನು ನಿರ್ಧರಿಸಲು ಅವರು ಯಾರು ಅನ್ನೋ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದರು. ಅವರಿಗೆ ಟಿಕೆಟ್ ಯಾರು ಕೊಡೋರು ಯಾರು? ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕುಳಿತು ಚರ್ಚೆ ಮಾಡಿ ಅಭ್ಯರ್ಥಿಯನ್ನು ಅಂತಿಮ ಗೊಳಿಸಬೇಕು ತಾನೇ? ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಿರಲಿಲ್ಲ, ಯಾಕೆಂದರೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿಸುವುದು ನಮ್ಮ ಆದ್ಯತೆಯಾಗಿರಬೇಕೆಂದು ದೇವೇಗೌಡರು ಹೇಳಿದ್ದರು ಎಂದು ನಿಖಿಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಶಾಕಿಂಗ್ ರಿಯಾಕ್ಷನ್

Follow us on