ಬೆಂಗಳೂರಿನ ಸುರಕ್ಷಿತ ಸ್ಥಳದಲ್ಲಿ ಸುಭದ್ರ ಮನೆಕಟ್ಟಿಕೊಂಡವರು ಮಳೆ ಇನ್ನೂ ಸುರಿಯಲಿ ಎನ್ನುತ್ತಾರೆ: ನಿಖಿಲ್ ಕುಮಾರಸ್ವಾಮಿ

Updated on: May 22, 2025 | 6:24 PM

ಸಾಯಿ ಲೇಔಟ್ ಎರಡು ಮೂರು ಬಾರಿ ಭೇಟಿ ನೀಡಿ ಜನರ ಸಮಸ್ಯೆ ಅರ್ಥಮಾಡಿಕೊಂಡಿದ್ದ ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿ ರಾಜಾಕಾಲುವೆ ದುರಸ್ತಿ ಕಾರ್ಯಕ್ಕೆ ₹19 ಕೋಟಿ ಬಿಡುಗಡೆ ಮಾಡಿಸಿದ್ದರಂತೆ, ಕಂಟ್ರ್ಯಾಕ್ಟರ್ ₹ 7 ಕೋಟಿ ಕೆಲಸ ಮಾಡಿಸಿದ್ದಾನೆ, ಅದರೆ ಗುತ್ತಿಗೆದಾರರ ಹಣವನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡದ ಕಾರಣ ಕೆಲಸ ಸ್ಥಗಿತಗೊಂಡು ಜನಕ್ಕೆ ತಾಪತ್ರವಾಗುತ್ತಿದೆ ಎಂದು ನಿಖಿಲ್ ಹೇಳಿದರು.

ಬೆಂಗಳೂರು, ಮೇ 22: ಮಳೆ ಬಂದರೆ ಜಲಾಶಯಗಳು ತುಂಬುತ್ತವೆ, ರೈತರಿಗೆ ಅನುಕೂಲವಾಗುತ್ತದೆ, ಬೆಂಗಳೂರಿನ ಕೆಲಭಾಗಗಳಲ್ಲಿ ಜನರಿಗೆ ತೊಂದರೆಯಾಗಿರಬಹುದು, ಆದರೆ ಇನ್ನೂ ಮಳೆಯಾಗಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕಮಾರ್ (DCM DK Shivakumar) ಹೇಳಿದ್ದನ್ನು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು. ಡಿಸಿಎಂ ಅವರ ಮನೆ ಸುಭದ್ರವಾದ, ಸುರಕ್ಷಿತವಾದ ಮತ್ತು ನಗರದ ಅತ್ಯುತ್ತಮ ಎಂದು ಕರೆಸಿಕೊಳ್ಳುವ ಸ್ಥಳದಲ್ಲಿದೆ, ಬೇರೆ ಪ್ರದೇಶಗಳ ಜನ ಅನುಭವಿಸುತ್ತಿರುವ ಸಮಸ್ಯೆ, ನೋವು ಅವರಿಗೆ ಹೇಗೆ ಅರ್ಥವಾದೀತು? ಜನಸಾಮಾನ್ಯರ ಬವಣೆಗಳಿಗೆ ಪರಿಹಾರ ಒದಗಿಸುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:  ಶಿವಕುಮಾರ್ ರಾಜಕೀಯ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ: ನಿಖಿಲ್ ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ