Nikhil Kumarswamy: ಕೃಷಿಯ ಕುರಿತು ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?; ವಿಡಿಯೋ ನೋಡಿ

| Updated By: shivaprasad.hs

Updated on: Oct 17, 2021 | 8:20 PM

Rider Film: ರೈಡರ್ ಚಿತ್ರದ ಬಿಡುಗಡೆಗೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಟಿವಿ9ನೊಂದಿಗಿನ ವಿಶೇಷ ಸಂದರ್ಶನದಲ್ಲಿ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಲವು ವಿಚಾರಗಳ ಕುರಿತಂತೆ ಮಾತನಾಡಿದ್ದಾರೆ. ಈ ವೇಳೆ ಅವರು ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್ ನಟ ನಿಖಿಲ್ ಕುಮಾರಸ್ವಾಮಿ ನಟನೆಯೊಂದಿಗೆ ರಾಜಕೀಯ, ಕೃಷಿ ಮೊದಲಾದ ಕ್ಷೇತ್ರಗಳಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ರೈಡರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಟಿವಿ9ನೊಂದಿಗಿನ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡುತ್ತಾ ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಕೃಷಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ನಿಖಿಲ್, ತಂದೆ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಹಾಗೂ ಹಸುಗಳ ಕುರಿತು ಇರುವ ಪ್ರೀತಿಯನ್ನು ತೆರೆದಿಟ್ಟಿದ್ದಾರೆ. ‘‘ದಿನವೂ ಹಸುವನ್ನು ಪೂಜೆ ಮಾಡುತ್ತೇವೆ. ಇತ್ತೀಚೆಗೆ ನಮ್ಮಲ್ಲಿ ಗಿರ್ ಹಸುಗಳೂ ಇವೆ. ಪ್ರಸ್ತುತ ಅದು ಟ್ರೆಂಡ್ ಆಗಿದ್ದು, ಎ2 ಹಾಲಿಗೆ ಬಹಳ ಮೌಲ್ಯವಿದೆ. 2006ರಲ್ಲಿ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿ ಅವರಿಗೆ ಗುಜರಾತ್​ನಿಂದ ಗಿರ್ ಹಸುವನ್ನು ಉಡುಗೊರೆಯಾಗಿ ನೀಡಲಾಗಿತ್ತು’’ ಎಂದು ನಿಖಿಲ್ ನೆನಪಿಸಿಕೊಂಡಿದ್ದಾರೆ.

ರೈತರ ಕುರಿತು ಮಾತನಾಡಿದ ನಿಖಿಲ್, ಎಲ್ಲರೂ ರೈತರ ಶ್ರಮವನ್ನು ಪ್ರತಿದಿನವೂ ಸ್ಮರಿಸಿಕೊಳ್ಳಬೇಕು. ನಗರದಲ್ಲಿರುವ ಬಹಳಷ್ಟು ಜನರಿಗೆ ತಿನ್ನುವ ಆಹಾರದ ಮೂಲ ಗೊತ್ತಿರುವುದಿಲ್ಲ. ಈ ಕುರಿತು ಎಲ್ಲರೂ ಸತತವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮಗನಿಗೂ ಕೃಷಿಯ ಪರಿಚಯವನ್ನು ಮಾಡಿಸುತ್ತೇನೆ ಎಂದು ಇದೇ ವೇಳೆ ಅವರು ನುಡಿದಿದ್ದಾರೆ.

ನಿಖಿಲ್ ಪುತ್ರನಿಗೆ ಕೃಷಿ ಕಲಿಸುವುದರ ಕುರಿತು ಮಾತನಾಡಿರುವ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:

‘ನಾನು ಹೊರಡುವಾಗ ರಾಯನ್​ ಕಣ್ಣಲ್ಲಿ ನೀರು ತುಂಬಿತ್ತು’; ಮೇಘನಾ ರಾಜ್​

ಸಾಕುನಾಯಿಗೆ ಬರೋಬ್ಬರಿ ₹ 15 ಕೋಟಿ ಆಸ್ತಿ ಬರೆಯಲು ಮುಂದಾದ ಮಾಡೆಲ್; ಇದರ ಹಿಂದಿದೆ ಅಚ್ಚರಿಯ ಕಾರಣ

Follow us on