ನಿಖಿಲ್ ಬೈಕ್ ಢಿಕ್ಕಿ ಹೊಡೆದಿದ್ದು ಯಶ್ ಬೆಂಗಾವಲು ವಾಹನಕ್ಕಲ್ಲ, ಬೇರೆ ಕರ್ತವ್ಯದಲ್ಲಿದ್ದ ಪೊಲೀಸ್ ಜೀಪಿಗೆ: ಪೊಲೀಸ್ ವರಿಷ್ಠಾಧಿಕಾರಿ, ಗದಗ

|

Updated on: Jan 09, 2024 | 1:57 PM

ಯಶ್ ಇದ್ದ ಕಾರನ್ನು ಚೇಸ್ ಮಾಡುವಾಗ ದುರಂತ ಸಂಭವಿಸಿತು ಎಂಬ ವದಂತಿಯನ್ನೂ ನೇಮಗೌಡ್ ತಳ್ಳಿಹಾಕಿದರು. ಯಶ್ ಕಾರಿನ ಹಿಂದೆ ಪೊಲೀಸ್ ವಾಹನಗಳಿದ್ದ ಕಾರಣ ಯಾರೂ ಚೇಸ್ ಮಾಡುವುದು ಸಾಧ್ಯವಿರಲಿಲ್ಲ, ಅವರು ವಾಪಸ್ಸು ಹೋದ ಎಷ್ಟೋ ಹೊತ್ತಿನ ನಂತರ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

ಬೆಂಗಳೂರು: ಚಿತ್ರನಟ ಯಶ್ (Yash) ಸೂರಣಗಿಗೆ ಭೇಟಿ ನೀಡಿ ವಾಪಸ್ಸು ಹೋಗುವಾಗ ನಿಖಿಲ್ (Nikhil) ಹೆಸರಿನ ಯುವಕ ಓಡಸುತ್ತಿದ್ದ ಬೈಕ್ ಗೆ ನಟನ ಬೆಂಗಾವಲು ಪಡೆ ಢಿಕ್ಕಿ ಹೊಡೆಯಿತು ಮತ್ತು ಅದರ ಪರಿಣಾಮವೇ ಗಂಭೀರವಾಗಿ ಗಾಯಗೊಂಡ ನಿಖಿಲ್ ಆಸ್ಪತ್ರೆಯಲ್ಲಿ ಮರಣಹೊಂದಿದ ಎಂಬ ವದಂತಿಗೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ್ (BS Nemagoud) ಸ್ಪಷ್ಟನೆ ನೀಡಿದ್ದಾರೆ. ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಪೊಲೀಸ್ ಅಧಿಕಾರಿ, ಯಶ್ ಬೆಂಗಾವಲು ಪಡೆಯ ಭಾಗವಾಗಿದ್ದ ಯಾವುದೇ ವಾಹನ ಅಪಘಾತದ ಭಾಗವಾಗಿಲ್ಲ, ನಿಖಿಲ್ ಓಡಿಸುತ್ತಿದ್ದ ಬೈಕ್ ಮತ್ತು ಪೊಲೀಸ್ ಜೀಪೊಂದರ ನಡುವೆ ಮುಖಾಮುಖಿ ಢಿಕ್ಕಿ ಸಂಭಸಿದೆ, ಈ ಜೀಪು ಬೆಂಗಾವಲು ಪಡೆಯಲ್ಲಿರಲಿಲ್ಲ, ಬೇರೆ ಕೆಲಸದ ನಿಮಿತ್ತ ತೆರಳಿದ್ದ ಜೀಪು ಹೆಡ್ ಕ್ವಾರ್ಟರ್ ಗೆ ಮರಳುವಾಗ ಅಪಘಾತ ಸಂಭವಿಸಿದೆ ಎಂದು ಹೇಳಿದರು. ಯಶ್ ಇದ್ದ ಕಾರನ್ನು ಚೇಸ್ ಮಾಡುವಾಗ ದುರಂತ ಸಂಭವಿಸಿತು ಎಂಬ ವದಂತಿಯನ್ನೂ ನೇಮಗೌಡ್ ತಳ್ಳಿಹಾಕಿದರು. ಯಶ್ ಕಾರಿನ ಹಿಂದೆ ಪೊಲೀಸ್ ವಾಹನಗಳಿದ್ದ ಕಾರಣ ಯಾರೂ ಚೇಸ್ ಮಾಡುವುದು ಸಾಧ್ಯವಿರಲಿಲ್ಲ, ಅವರು ವಾಪಸ್ಸು ಹೋದ ಎಷ್ಟೋ ಹೊತ್ತಿನ ನಂತರ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ