Gadag Police: ಮೊಬೈಲ್​ ಕಳುವಾಯಿತೇ? ಚಿಂತಿಸಬೇಡಿ ಕ್ಷಣಾರ್ಧದಲ್ಲಿ ವಾಪಸ್ ನಿಮಗೆ ಸಿಗಲಿದೆ! ಗದಗ ಜಿಲ್ಲಾ ಪೊಲೀಸರಿಂದ ಮಸ್ತ್​​ ಪ್ಲಾನ್

Gadag SP ಇನ್ಮುಂದೆ ಜನರು ಮೊಬೈಲ್​ ಕಳ್ಳತನವಾದ ಬಳಿಕ ಪೊಲೀಸ್​ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಮೊಬೈಲ್​ ಕಳೆದುಕೊಂಡಿರುವ ವ್ಯಕ್ತಿ ತಾನು ಇದ್ದ ಜಾಗದಿಂದಲೇ ವೇಗವಾಗಿ ಮೊಬಿಫೈ ಮೂಲಕ ದೂರು ನೀಡಬಹುದಾಗಿದೆ.

Gadag Police: ಮೊಬೈಲ್​ ಕಳುವಾಯಿತೇ? ಚಿಂತಿಸಬೇಡಿ ಕ್ಷಣಾರ್ಧದಲ್ಲಿ ವಾಪಸ್ ನಿಮಗೆ ಸಿಗಲಿದೆ! ಗದಗ ಜಿಲ್ಲಾ ಪೊಲೀಸರಿಂದ ಮಸ್ತ್​​ ಪ್ಲಾನ್
ಗದಗ ಜಿಲ್ಲಾ ಪೊಲೀಸರಿಂದ ಮಸ್ತ್​​ ಪ್ಲಾನ್
Follow us
ಸಾಧು ಶ್ರೀನಾಥ್​
|

Updated on: Feb 26, 2023 | 6:57 AM

ಮೊಬೈಲ್​ ಕಳ್ಳತನ (Mobile Theft) ಮುಕ್ತ ಗದಗ ಜಿಲ್ಲೆ ಮಾಡಲು ಗದಗ ಪೊಲೀಸ್​​ ಇಲಾಖೆ (Gadag SP) ಮಸ್ತ್​​ ಪ್ಲಾನ್ ಮಾಡಿದೆ. ಯಾರೇ ಮೊಬೈಲ್ ಕಳ್ಳತನ ಮಾಡಿದ್ರೆ ಕ್ಷಣಾರ್ಧದಲ್ಲಿ ಬಲೆಗೆ ಬೀಳ್ತಾರೆ. ಮೊಬೈಲ್ ಕಳ್ಳರ ಹೆಡೆಮುರಿ ಕಟ್ಟಲು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಮೊಬೈಲ್​ ಕಳ್ಳತನವಾದ್ರೂ ಸುಲಭವಾಗಿ ಪತ್ತೆಹಚ್ಚಲು “ಮೊಬಿಫೈ” (Mobify technology) ತಂತ್ರಜ್ಞಾನವೊಂದನ್ನು ಪ್ರಾರಂಭಿಸಿದೆ. ಈ ಮೂಲಕ ಗದಗ ಜಿಲ್ಲೆಯನ್ನು ಮೊಬೈಲ್​ ಕಳ್ಳತನ ಮುಕ್ತವನ್ನಾಗಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಈಗಾಗಲೇ ನೂರಾರು ಪ್ರಕರಣ ದಾಖಲಾಗಿವೆ. ಏನಿದು ಮೊಬಿಫೈ ಅಂತೀರಾ ಈ ಸ್ಟೋರಿ ನೋಡಿ… ಮೊಬೈಲ್ ಕಳ್ಳರಿಗೆ ಖೆಡ್ಡಾ ತೋಡಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್…! ರಾಜ್ಯದಲ್ಲೇ ಗದಗ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಕೆ….! ಮೊಬೈಲ್ ಕಳೆದು ಹೋದ ಬಳಿಕ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಮೊಬೈಲ್ ಪತ್ತೆ ಹಚ್ಚಲು ಹೊಸ ಮೊಬಿಫೈ ತಂತ್ರಜ್ಞಾನ..! ಗದಗ ಪೊಲೀಸ್ ಇಲಾಖೆ ನಿರ್ಧಾರಕ್ಕೆ ಗದಗ ಜಿಲ್ಲೆಯ ಜನರಿಂದ ಮೆಚ್ಚುಗೆ…!

ಇದು ಮೊಬೈಲ್ ಜಗತ್ತು. ಸಣ್ಣ ಮಕ್ಕಳಿಂದ ದೊಡ್ಡವರ ಕೈಯಲ್ಲೂ ಮೊಬೈಲ್ ಕಮಾಲ್. ಒಂದು ಕ್ಷಣ ಮೊಬೈಲ್ ಇಲ್ಲಾಂದ್ರೆ ವಿಲವಿಲ ಅಂತಾರೆ. ಇನ್ನೂ ಇತ್ತಿಚೀನ ದಿನಗಳಲ್ಲಿ ಮೊಬೈಲ್ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ಪೊಲೀಸ್ರಿಗೂ ಮೊಬೈಲ್ ಪತ್ತೆ ಹಚ್ಚೋದು ಕಷ್ಟವಾಗಿತ್ತು. ಆದ್ರೆ, ಗದಗ ಜಿಲ್ಲಾ ಪೊಲೀಸ್ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ಮೊಬೈಲ್ ಕಳ್ಳತನ ಪತ್ತೆಗೆ ಹೊಸ ಮೊಬಿಫೈ ತಂತ್ರಜ್ಞಾನ ಪ್ರಾರಂಭಿಸಿದ್ದಾರೆ.

ಹೌದು ಗದಗ ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಸಿಕ್ಕಾಪಟ್ಟೆ ದಾಖಲಾಗುತ್ತಿವೆ. ಹೀಗಾಗಿ ಗದಗ ಜಿಲ್ಲೆಗೆ ಆಗಮಿಸಿದ ನೂತನ ಎಸ್ಪಿ ಬಿ ಎಸ್ ನೇಮಗೌಡ, ಗದಗ ಜಿಲ್ಲೆ ಮೊಬೈಲ್ ಕಳ್ಳತನ ಮುಕ್ತ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಮೊಬಿಫೈ ಅನ್ನೋ ಹೊಸ ತಂತ್ರಜ್ಞಾನ ಪ್ರಾರಂಭಿಸಿದ್ದಾರೆ.

ಏನಿದು ಮೊಬಿಫೈ ತಂತ್ರಜ್ಞಾನ ಅಂದ್ರೆ, ಯಾರು ಮೊಬೈಲ್​ನ್ನು ಕಳೆದುಕೊಂಡಿರುತ್ತಾರೋ ಅವರು ಬೇರೊಂದು ಮೊಬೈಲ್​ನಿಂದ ಹಾಯ್​ ಎಂದು 8277969900 ನಂಬರ್​ ಅಥವಾ ಈಗಾಗಲೇ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಕ್ಯೂ ಆರ್​ ಕೋಡ್​​ ಅನ್ನು ಸ್ಕ್ಯಾನ್​ ಮಾಡಬೇಕು.

ಇದರಿಂದ ಇಲಾಖೆಯಿಂದ ಹಾಯ್ ಅಂತ ಕಳುಹಿಸಿದ Whatsapp ಸಂಖ್ಯೆಗೆ ಸಂದೇಶ ಹೋಗುತ್ತದೆ. ಕೂಡಲೇ ಇಲಾಖೆ ನಿಮಗೆ ಲಿಂಕ್​ವೊಂದನ್ನು ಕಳುಹಿಸುತ್ತದೆ. ಆಗ ಲಿಂಕ್​ ಒತ್ತಿ ನೀವು ಕಳೆದುಕೊಂಡ ಮೊಬೈಲ್​​ನ ಮಾಹಿತಿ ದಾಖಲಿಸಬೇಕು. ಇದರ ಮೂಲಕ ಮೊಬೈಲ್​ ಲೊಕೇಶನ್ ಪತ್ತೆಹಚ್ಚಲಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೇ ಮೊಬೈಲ್​ನಲ್ಲಿದ್ದ ನಿಮ್ಮ ಖಾಸಗಿ ಮಾಹಿತಿಗಳನ್ನು ರಕ್ಷಣೆ ಮಾಡಲು ಮೊಬೈಲ್​ನ್ನು ಬ್ಲಾಕ್​​ ಮಾಡಲಾಗುತ್ತದೆ. ಇದೇ ಮಾಹಿತಿಯನ್ನು ಇಲಾಖೆ Central Equipment Identity Register (CEIR) ನೊಂದಿಗೆ ಹಂಚಿಕೊಳ್ಳುತ್ತದೆ ಅಂತ ಗದಗ ಎಸ್ಪಿ ಬಿ ಎಸ್ ನೇಮಗೌಡ ತಿಳಿಸಿದ್ದಾರೆ.

ಈಗಾಗಲೇ ಹೊಸ ಮೊಬಿಫೈ ತಂತ್ರಜ್ಞಾನ ಆರಂಭಿಸಿದ ಕೆಲವೇ ದಿನಗಳಲ್ಲಿ 250ಕ್ಕೂ ಅಧಿಕ ಮೊಬೈಲ್ ಕಳ್ಳತನ ಹಾಗೂ ಕಳೆದುಕೊಂಡ ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸ್​ ಇಲಾಖೆ ಈ ಪ್ರಕರಣಗಳನ್ನು ಒಂದೊಂದಾಗಿ ತನಿಖೆ ನಡೆಸುತ್ತಿದೆ. ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಗದಗ ಪೊಲೀಸ್​ ಇಲಾಖೆಗೆ ಸಲ್ಲುತ್ತದೆ.

ಇನ್ಮುಂದೆ ಜನರು ಮೊಬೈಲ್​ ಕಳ್ಳತನವಾದ ಬಳಿಕ ಪೊಲೀಸ್​ ಠಾಣೆಗೆ ಹೋಗುವ ಅವಶ್ಯಕತೆ ಇಲ್ಲ. ಮೊಬೈಲ್​ ಕಳೆದುಕೊಂಡಿರುವ ವ್ಯಕ್ತಿ ತಾನು ಇದ್ದ ಜಾಗದಿಂದಲೇ ವೇಗವಾಗಿ ಮೊಬಿಫೈ ಮೂಲಕ ದೂರು ನೀಡಬಹುದಾಗಿದೆ.

ದೂರುದಾರ, ಮೊಬಿಫೈ ತಂತ್ರಜ್ಞಾನದ ಮೂಲಕ, ಪೊಲೀಸ್​​ ಇಲಾಖೆ ನೀಡಿದ ನಂಬರ್​ಗೆ ಸಂದೇಶ ರವಾನೆ ಮಾಡಬೇಕು. ಇದರಿಂದ ದೂರುದಾರನ ಮೊಬೈಲ್​ನನ್ನು ಬ್ಲಾಕ್​​ ಮಾಡಲಾಗುತ್ತದೆ. ಇದರಿಂದ ಕಳ್ಳನಿಗೆ ಕದ್ದ ಮೊಬೈಲ್​ನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಆಗ ಕದ್ದ ಮೊಬೈಲ್​ ಡಮ್ಮಿಯಾಗುತ್ತದೆ. ಇದರಿಂದ ಕಳ್ಳರು ಮೊಬೈಲ್​ ಕಳ್ಳತನಕ್ಕೆ ಕೈ ಹಾಕುವುದಿಲ್ಲ.

ಈ ಮೂಲಕ ಮೊಬೈಲ್ ಕಳ್ಳತನ ಮುಕ್ತ ನಗರವಾಗಲಿದೆ. ಈ ಹೊಸ ತಂತ್ರಜ್ಞಾನಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿ ನಿಮಿಷಕ್ಕೊಂದು ಪ್ರಕರಣ ದಾಖಲಾಗುತ್ತಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ. ಪೊಲೀಸ್ ಇಲಾಖೆ ಹೊಸ ಮೊಬಿಫೈ ತಂತ್ರಜ್ಞಾನ ಆರಂಭಿಸಿದಕ್ಕೆ ಗದಗ ಜಿಲ್ಲೆಯ ಜನ್ರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲು ಪ್ರಾಯೋಗಿಕವಾಗಿ ಜಾರಿಗೆ ಮಾಡಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಇದನ್ನು ಉತ್ತಮಗೊಳಿಸಿ ಜಾರಿ ಮಾಡಲಾಗುತ್ತದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ತಂತ್ರಜ್ಞಾನದಿಂದ ಕದ್ದ ಮೊಬೈಲ್​ ಟ್ರ್ಯಾಕಿಂಗ್​, ಬ್ಲಾಕ್​, ಮೊಬೈಲ್​ ಲೊಕೇಶನ್​ ಪತ್ತೆ ಹಚ್ಚಲು ಸುಲಭವಾಗುತ್ತಿದೆ. ಮತ್ತು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಪ್ರಯೋಗ ಮಾಡುತ್ತಿರುವುದು ಗದಗ ನಗರ ಎಂದು ಹೆಮ್ಮೆ. ಮೊಬೈಲ್ ಕಳೆದುಕೊಂಡು ಒದ್ದಾಡುವ ಜನ್ರಿಗೆ ಪೊಲೀಸ್ ಇಲಾಖೆ ಜಾರಿ ತಂದ ಮೊಬಿಫೈ ತಂತ್ರಜ್ಞಾನ ಫುಲ್ ಖುಷಿ ತಂದಿದೆ

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ