ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ

Updated on: May 30, 2025 | 12:21 PM

ಸಿಕ್ಕಿಂನ ಮಂಗನ್​ನಲ್ಲಿ ತಡರಾತ್ರಿ ಪ್ರಯಾಣಿಸುತ್ತಿದ್ದ ಬಸ್​ ತೀಸ್ತಾ ನದಿಗೆ ಉರುಳಿದ್ದು, ಇಬ್ಬರನ್ನು ರಕ್ಷಿಸಲಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಒಡಿಶಾ, ಉತ್ತರ ಪ್ರದೇಶ ಮತ್ತು ತ್ರಿಪುರದ ಒಂಬತ್ತು ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ ಇಬ್ಬರು ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋನಮ್ ಡೆಚು ಭುಟಿಯಾ ಹೇಳಿದರು.

ಮಂಗನ್, ಮೇ 30: ಸಿಕ್ಕಿಂನ ಮಂಗನ್​ನಲ್ಲಿ ತಡರಾತ್ರಿ ಪ್ರಯಾಣಿಸುತ್ತಿದ್ದ ಬಸ್​ ತೀಸ್ತಾ ನದಿಗೆ ಉರುಳಿದ್ದು, ಇಬ್ಬರನ್ನು ರಕ್ಷಿಸಲಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಒಡಿಶಾ, ಉತ್ತರ ಪ್ರದೇಶ ಮತ್ತು ತ್ರಿಪುರದ ಒಂಬತ್ತು ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಇಬ್ಬರು ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋನಮ್ ಡೆಚು ಭುಟಿಯಾ ಹೇಳಿದರು.

ಸೇನೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ಅಗ್ನಿಶಾಮಕ ದಳ ಮತ್ತು ಸಿಕ್ಕಿಂ ಪೊಲೀಸರ ರಕ್ಷಣಾ ತಂಡಗಳು ಕಾಣೆಯಾದ ಪ್ರವಾಸಿಗರನ್ನು ಹುಡುಕುತ್ತಿವೆ ಎಂದು ಅವರು ಹೇಳಿದರು.
ಒಡಿಶಾ, ಉತ್ತರ ಪ್ರದೇಶ ಮತ್ತು ತ್ರಿಪುರದ ಪ್ರವಾಸಿಗರು ಲಾಚೆನ್‌ನಿಂದ ಲಾಚುಂಗ್‌ಗೆ ಪ್ರಯಾಣಿಸುತ್ತಿದ್ದರು ಎಂದು ಅವರು ಹೇಳಿದರು.

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಪೋಸ್ಟ್​ ಮಾಡಿದ್ದು, ಮೇ 29 ರಂದು ಮಂಗನ್ ಜಿಲ್ಲೆಯ ಲಾಚೆನ್ ಮತ್ತು ಲಾಚುಂಗ್ ನಡುವಿನ ಚುಬೊಂಬು ಬಳಿ ಸಂಭವಿಸಿದ ದುರಂತ ರಸ್ತೆ ಅಪಘಾತ ತೀವ್ರ ಆಘಾತವನ್ನುಟು ಮಾಡಿದೆ ಎಂದು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಲಿಗಾಗಿ ಇಲ್ಲಿ ಕ್ಲಿಕ್ ಮಾಡಿ