ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟರಾಗಿರುವ ರಾಜ್ಯದ ಶೇಕಡಾ 90 ರಷ್ಟು ಮಹಿಳೆಯರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ: ಲಕ್ಷ್ಮಣ ಸವದಿ

|

Updated on: Apr 18, 2024 | 6:29 PM

ರಾಜ್ಯದಲ್ಲಿ ಜನ ಗ್ಯಾರಂಟಿ ಯೋಜನೆಗಳಿಂದ ಅಗಿರುವ ಪ್ರಯೋಜನಗಳಿಂದ ಸಂತುಷ್ಟರಾಗಿರುವುದನ್ನು ಕಂಡು ಹಲುಬುತ್ತಿರುವ ವಿರೋಧ ಪಕ್ಷಗಳ ನಾಯಕರು ಲೋಕಸಭಾ ಚುನಾವಣೆ ಬಳಿಕ ಅವು ನಿಲ್ಲುತ್ತವೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ (Chikkodi LS seat) ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi), ಪ್ರಿಯಾಂಕಾ ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಗ್ರಾಮಪಂಚಾಯಿತಿ ಹಿಡಿದು ಎಲ್ಲ ಹಂತದ ಮತದಾರರ ಜೊತೆ ಸಭೆ ನಡೆಸಲಿದ್ದೇವೆ ಎಂದು ಹೇಳಿದ ಸವದಿ, ಮತದಾರ ಈಗ ಬದಲಾಗಿದ್ದಾನೆ, ಮೊದಲೆಲ್ಲ ಅವನು ರಾಜಕೀಯ ನಾಯಕರು ಹೇಳುವುದನ್ನೆಲ್ಲ ನಂಬುತ್ತಿದ್ದ, ಆದರೆ ಈಗ ಪ್ರಜ್ಞಾವಂತನಾಗಿದ್ದಾನೆ, ಯಾವುದು ಸರಿ ಯಾವುದು ತಪ್ಪು ಅಂತ ವಿವೇಚಿಸುವ ಶಕ್ತಿ ಅವನಲ್ಲಿದೆ ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳು ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿವೆ, ಈ ತುಟ್ಟಿಗಾಲದಲ್ಲಿ ಅವು ಮಹಿಳೆಯರ ಬದುಕನ್ನು ನಿರಾಳಗೊಳಿಸಿವೆ, ಅವರ ತೊಂದರೆ, ಸಮಸ್ಯೆಗಳು ಕಡಿಮೆಯಾಗಿವೆ, ರಾಜ್ಯದ ಮಹಿಳಾ ಮತದಾರರ ಪೈಕಿ ಶೇಕಡಾ 90ರಷ್ಟು ಜನ ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂದು ಸವದಿ ಹೇಳಿದರು.

ರಾಜ್ಯದಲ್ಲಿ ಜನ ಗ್ಯಾರಂಟಿ ಯೋಜನೆಗಳಿಂದ ಅಗಿರುವ ಪ್ರಯೋಜನಗಳಿಂದ ಸಂತುಷ್ಟರಾಗಿರುವುದನ್ನು ಕಂಡು ಹಲುಬುತ್ತಿರುವ ವಿರೋಧ ಪಕ್ಷಗಳ ನಾಯಕರು ಲೋಕಸಭಾ ಚುನಾವಣೆ ಬಳಿಕ ಅವು ನಿಲ್ಲುತ್ತವೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ವ್ಯಾಪಾರೀಕರಣಗೊಂಡಿರುವ ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸುವ ಕೆಲಸ ಈಶ್ವರಪ್ಪ ಶುರುಮಾಡಿದ್ದಾರೆ: ಲಕ್ಷ್ಮಣ ಸವದಿ