ಅಳುತ್ತಾ ಬಂದು ದರ್ಶನ್ ಕಾಲಿಗೆ ಬಿದ್ದ ಯುವತಿ; ಹೇಗಿತ್ತು ನೋಡಿ ಡಿ ಬಾಸ್ ಪ್ರತಿಕ್ರಿಯೆ?
ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಪರವಾಗಿ ದರ್ಶನ್ ಅವರು ಮತ ಕೇಳುತ್ತಿದ್ದಾರೆ. ಜಿಲ್ಲೆಯ ಹಲವು ಊರುಗಳಿಗೆ ಭೇಟಿ ನೀಡಿ ಅವರು ಪ್ರಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅವರನ್ನು ನೋಡಲು ಒಂದು ಯುವತಿಯೊಬ್ಬಳು ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾಳೆ. ಆಕೆಯನ್ನು ಸಮಾಧಾನ ಮಾಡಿದ ದರ್ಶನ್ ಅವರು ತುಂಬ ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಈಗ ಅವರು ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರವಾಗಿ ದರ್ಶನ್ ಮತ ಕೇಳುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ತೆರಳಿ ಅವರು ಕ್ಯಾಂಪೇನ್ ನಡೆಸುತ್ತಿದ್ದಾರೆ. ಈ ವೇಳೆ ಅವರನ್ನು ನೋಡಲು ಜನಸಾಗರವೇ ಸೇರುತ್ತಿದೆ. ಇಂದು (ಏಪ್ರಿಲ್ 18) ಮಂಡ್ಯದಲ್ಲಿ ದರ್ಶನ್ ಅವರು ಪ್ರಚಾರ ಮಾಡುವಾಗ ಯುವತಿಯೊಬ್ಬಳು ಕಣ್ಣೀರು ಹಾಕುತ್ತಾ ಓಡಿಬಂದಿದ್ದಾಳೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಯುವತಿ ಎಮೋಷನಲ್ ಆಗಿದ್ದಾಳೆ. ಅಲ್ಲದೇ ಡಿ ಬಾಸ್ (D Boss) ಕಾಲಿಗೆ ಬಿದ್ದು ಅಭಿಮಾನ ಪ್ರದರ್ಶಿಸಿದ್ದಾಳೆ. ಎಮೋಷನಲ್ ಆಗಿದ್ದ ಯುವತಿಯನ್ನು ದರ್ಶನ್ ಸಮಾಧಾನ ಮಾಡಿದ್ದಾರೆ. ‘ಮೊದಲಿಗೆ ಈಕೆಗೆ ನೀರು ಕೊಡಿ’ ಎಂದು ದರ್ಶನ್ ಹೇಳಿದ್ದಾರೆ. ಆ ಜನಜಂಗುಳಿಯ ನಡುವೆಯೂ ತುಂಬ ತಾಳ್ಮೆಯಿಂದ ಫೋಟೋಗೆ ಪೋಸ್ ನೀಡಿದ್ದಾರೆ. ‘ಚೆನ್ನಾಗಿ ಓದಬೇಕು’ ಎಂದು ಆಕೆಗೆ ಕಿವಿಮಾತು ಕೇಳಿ ಕಳಿಸಿದ್ದಾರೆ. ಕೈ ನೋವಿನ ನಡುವೆಯೂ ದರ್ಶನ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.