ವ್ಯಾಪಾರೀಕರಣಗೊಂಡಿರುವ ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸುವ ಕೆಲಸ ಈಶ್ವರಪ್ಪ ಶುರುಮಾಡಿದ್ದಾರೆ: ಲಕ್ಷ್ಮಣ ಸವದಿ

ವ್ಯಾಪಾರೀಕರಣಗೊಂಡಿರುವ ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸುವ ಕೆಲಸ ಈಶ್ವರಪ್ಪ ಶುರುಮಾಡಿದ್ದಾರೆ: ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 11, 2024 | 1:44 PM

ಎರಡು ದಶಕಗಳ ಕಾಲ ಬಿಜೆಪಿಯಲ್ಲಿದ್ದ ತಾನು ಯಾಕೆ ಹೊರಬಂದೆ ಅನ್ನೋದು ಜನಕ್ಕೆ ಅರ್ಥವಾಗಿರಬಹುದು, ಈಗ ರಾಜ್ಯ ಬಿಜೆಪಿ ಶುದ್ಧೀಕರಣ ಮಾಡುವ ಜವಾಬ್ದಾರಿಯನ್ನು ಕೆಎಸ್ ಈಶ್ವರಪ್ಪ ಹೊತ್ತಿರುವಂತಿದೆ ಎಂದು ಹೇಳಿದ ಅವರು ಈಶ್ವರಪ್ಪ ಇನ್ನೂ ನಾಮಪತ್ರ ಸಲ್ಲಿಸಿಲ್ಲ, ಸಲ್ಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಅಂತ ಸಂದೇಹ ವ್ಯಕ್ತಡಿಸಿದರು.

ಚಿಕ್ಕೋಡಿ: ರಾಜ್ಯದಲ್ಲಿ ಬಿಜೆಪಿ ಅಧೋಗತಿಯನ್ನು ತಲುಪಿದೆ, ನಿಷ್ಠಾವಂತ ಕಾರ್ಯಕರ್ತರಿಗೆ (party loyalists) ಅಲ್ಲಿ ಬೆಲೆ ಇಲ್ಲ, ದಶಕಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಾ ಬಂದವರನ್ನು ಕಡೆಗಣಿಸಲಾಗುತ್ತಿದೆ ಎಂದು ಹಿಂದೊಮ್ಮೆ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ ಶಾಸಕರಾಗಿರುವ ಲಕ್ಷ್ಮಣ ಸವದಿ (Laxman Savadi) ಹೇಳಿದರು, ಬಾಗಲಕೋಟೆಯಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಅವರು ರಾಜ್ಯದ ಬಿಜೆಪಿ ನಾಯಕರಲ್ಲಿ (state BJP leadership) ಈಗ ತತ್ವ ಸಿದ್ಧಾಂತಗಳೇನೂ ಉಳಿದಿಲ್ಲ, ವ್ಯಾಪಾರೀಕರಣ ಅದರಲ್ಲಿ ಹಾಸುಹೊಕ್ಕಿದೆ ಎಂದ ಲಕ್ಷ್ಮಣ, ವಿಧಾಸಭಾ ಚುನಾವಣಾ ಸಮಯದಲ್ಲಿ ಹಣಕ್ಕಾಗಿ ಟಿಕೆಟ್ ಗಳನ್ನು ಮಾರಿಕೊಂಡ ವದಂತಿ ದಟ್ಟವಾಗಿ ಹರಡಿತ್ತು, ಈಗ ಲೋಕಸಭಾ ಚುನಾವಣೆಯಲ್ಲೂ ಉಮೇದುವಾರರು ಹಣ ಚೆಲ್ಲಿ ಟಿಕೆಟ್ ಪಡೆದಿರುವರೆಂದು ಆರೋಪಗಳು ಕೇಳಿಬರುತ್ತಿವೆ ಎಂದರು. ಎರಡು ದಶಕಗಳ ಕಾಲ ಬಿಜೆಪಿಯಲ್ಲಿದ್ದ ತಾನು ಯಾಕೆ ಹೊರಬಂದೆ ಅನ್ನೋದು ಜನಕ್ಕೆ ಅರ್ಥವಾಗಿರಬಹುದು, ಈಗ ರಾಜ್ಯ ಬಿಜೆಪಿ ಶುದ್ಧೀಕರಣ ಮಾಡುವ ಜವಾಬ್ದಾರಿಯನ್ನು ಕೆಎಸ್ ಈಶ್ವರಪ್ಪ ಹೊತ್ತಿರುವಂತಿದೆ ಎಂದು ಹೇಳಿದ ಅವರು ಈಶ್ವರಪ್ಪ ಇನ್ನೂ ನಾಮಪತ್ರ ಸಲ್ಲಿಸಿಲ್ಲ, ಸಲ್ಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಅಂತ ಸಂದೇಹ ವ್ಯಕ್ತಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಅಥಣಿ: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಪ್ತ ಅಣ್ಣಪ್ಪ ಬಸಪ್ಪ ನಿಂಬಾಳ ಬರ್ಬರ ಹತ್ಯೆ