ಶೂನ್ಯದಿಂದ ಶಿಖರಕ್ಕೇರಿದ ಝೀರೋಧ ಕಂಪನಿ ಸ್ಥಾಪಕ ನಿತಿನ್ ಕಾಮತ್​ಗೆ ಟಿವಿ9 ಪ್ರಶಸ್ತಿ

ಶೂನ್ಯದಿಂದ ಶಿಖರಕ್ಕೇರಿದ ಝೀರೋಧ ಕಂಪನಿ ಸ್ಥಾಪಕ ನಿತಿನ್ ಕಾಮತ್​ಗೆ ಟಿವಿ9 ಪ್ರಶಸ್ತಿ

TV9 Web
| Updated By: sandhya thejappa

Updated on:Jan 05, 2022 | 7:36 AM

2008ರಲ್ಲಿ ಜಾಗತಿಕ ಆರ್ಥಿಕತೆ ಕುಸಿದರೂ ಬೆಂಗಳೂರಿನ ಯುವಕನ ಹಣ ಸುರಕ್ಷಿತವಾಗಿತ್ತು. ಆಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಕಬ್ಬಿಣದ ಕಡಲೆಯಂತಾಗಿತ್ತು.

ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿತಿನ್ ಕಾಮತ್​ಗೆ ಸನ್ಮಾನಿಸಲಾಯಿತು. 2008ರಲ್ಲಿ ಜಾಗತಿಕ ಆರ್ಥಿಕತೆ ಕುಸಿದರೂ ಬೆಂಗಳೂರಿನ ಯುವಕನ ಹಣ ಸುರಕ್ಷಿತವಾಗಿತ್ತು. ಆಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಕಬ್ಬಿಣದ ಕಡಲೆಯಂತಾಗಿತ್ತು. ಷೇರು ಬ್ರೋಕರೇಜ್ ಶುಲ್ಕ ದುಬಾರಿಯಾಗಿದ್ದವು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಯೋಚಿಸಿದ ಯುವಕ, 2010 ರಲ್ಲಿ ತನ್ನದೇ ಷೇರು ಬ್ರೋಕರೇಜ್ ಕಂಪನಿ ಆರಂಭಿಸಿದ್ದರು. ಅತ್ಯಂತ ಕಡಿಮೆ ಶುಲ್ಕ ಪಡೆಯುವ ಮತ್ತು ಸರಳವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವ ಕಂಪನಿ ಬೆಂಗಳೂರಿನಲ್ಲಿ ತಲೆ ಎತ್ತಿತು. ಆ ಕಂಪನಿಯೇ ಝೀರೋಧ. ಈ ಕಂಪನಿಯ ಸ್ಥಾಪಕನೇ ಅಪ್ಪಟ ಕನ್ನಡಿಗ ನಿತಿನ್ ಕಾಮತ್.

ಇದನ್ನೂ ಓದಿ

‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್​ ಮಾತು

ಇಸ್ರೋ ಸಾಧಕಿ ರೂಪಾಗೆ ಟಿವಿ9 ಪ್ರಶಸ್ತಿ ಪ್ರಧಾನ; ವಿಡಿಯೋ ನೋಡಿ

Published on: Jan 05, 2022 07:23 AM