Loading video

ಕನ್ನಡ ಮಾತಾಡಮ್ಮ, ಗೋವಾ ಕ್ಯಾಸಿನೋನಲ್ಲಿ ನಿವೇದಿತಾ ಗೌಡಗೆ ಕನ್ನಡಿಗರ ಕ್ಲಾಸ್

|

Updated on: Mar 04, 2025 | 3:08 PM

Niveditha Gowda: ಕನ್ನಡಿಗರೇ ಹೆಚ್ಚಾಗಿದ್ದ ಕ್ಯಾಸಿನೋ ಕೇಂದ್ರಕ್ಕೆ ಅತಿಥಿಯಾಗಿ ಹೋಗಿದ್ದ ನಿವೇದಿತಾ ಗೌಡ, ಅಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಇಂಗ್ಲೀಷ್​ನಲ್ಲಿ ಉತ್ತರಿಸುತ್ತಿದ್ದರು. ಈ ವೇಳೆ ಅಲ್ಲಿ ಹಾಜರಿದ್ದ ಕನ್ನಡಿಗರು ‘ನಿವೇದಿತಾ ಕನ್ನಡದಲ್ಲಿ ಮಾತನಾಡು’ ಎಂದರು. ನಂತರ ನಟಿ ಮಾಡಿದ್ದೇನು? ಇಲ್ಲಿದೆ ನೋಡಿ ವಿಡಿಯೋ...

ಇನ್​ಸ್ಟಾಗ್ರಾಂ ಸೆಲೆಬ್ರಿಟಿ, ನಟಿ ನಿವೇದಿತಾ ಗೌಡ, ಗೋವಾದ ಕ್ಯಾಸಿನೋ (ಜೂಜು ಅಡ್ಡೆ)ಕ್ಕೆ ಅತಿಥಿಯಾಗಿ ಹೋಗಿದ್ದು, ಅಲ್ಲಿ ತಮ್ಮ ಬಗ್ಗೆ ಇಂಗ್ಲೀಷ್​ನಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಕನ್ನಡಿಗರೇ ಹೆಚ್ಚಾಗಿದ್ದ ಕ್ಯಾಸಿನೋ ಕೇಂದ್ರಕ್ಕೆ ಅತಿಥಿಯಾಗಿ ಹೋಗಿದ್ದ ನಿವೇದಿತಾ ಗೌಡ, ಅಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗಳಿಗೆ ಇಂಗ್ಲೀಷ್​ನಲ್ಲಿ ಉತ್ತರಿಸುತ್ತಿದ್ದರು. ಈ ವೇಳೆ ಅಲ್ಲಿ ಹಾಜರಿದ್ದ ಕನ್ನಡಿಗರು ‘ನಿವೇದಿತಾ ಕನ್ನಡದಲ್ಲಿ ಮಾತನಾಡು’ ಎಂದರು. ಕೂಡಲೇ ಭಾಷೆ ಬದಲಾಯಿಸಿಕೊಂಡ ನಿವೇದಿತಾ ಗೌಡ, ಕನ್ನಡದಲ್ಲಿ ಮಾತನಾಡಿ ಎಲ್ಲರೂ ಹೆಚ್ಚು ಹೆಚ್ಚು ಹಣ ಗೆದ್ದುಕೊಂಡು ಹೋಗಿ ಎಂದು ಶುಭ ಹಾರೈಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 04, 2025 03:03 PM