ನಿವೇದಿತಾ ಗೌಡ ಮದುವೆ ಆಗುವ ಹುಡುಗ ಹೇಗಿರಬೇಕು? ನೇರವಾಗಿ ಉತ್ತರಿಸಿದ ಸುಂದರಿ

Edited By:

Updated on: Oct 15, 2025 | 9:47 PM

ಟಿವಿ9 ಜತೆ ನಿವೇದಿತಾ ಗೌಡ ಮಾತಾಡಿದ್ದಾರೆ. ತಮ್ಮನ್ನು ಕೈ ಹಿಡಿಯುವ ಹುಡುಗ ಯಾವ ರೀತಿ ಇರಬೇಕು ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ತುಂಬಾ ಚೆನ್ನಾಗಿ ಇರಬೇಕು. ಗೌರವ ಕೊಡಬೇಕು, ಒಳ್ಳೆಯವರಾಗಿ ಇರಬೇಕು. ಬಹಳ ಇಷ್ಟಪಡಬೇಕು. ಪ್ರೀತಿ ಮಾಡಬೇಕು ಅಷ್ಟೇ’ ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ.

ನಟಿ ನಿವೇದಿತಾ ಗೌಡ (Niveditha Gowda) ಅವರು ಸದ್ಯಕ್ಕೆ ಸಿಂಗಲ್ ಆಗಿದ್ದಾರೆ. ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಚಂದನ್ ಶೆಟ್ಟಿ (Chandand Shetty) ಜೊತೆ ವಿಚ್ಛೇದನ ಪಡೆದ ಬಳಿಕ ಅವರು ಕೆಲಸದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಅವರ ಹೊಸ ಸಾಂಗ್ ಬಿಡುಗಡೆ ಆಗಿದೆ. ಈ ವೇಳೆ ‘ಟಿವಿ9’ ಜೊತೆ ನಿವೇದಿತಾ ಗೌಡ ಅವರು ಮಾತನಾಡಿದ್ದಾರೆ. ತಮ್ಮನ್ನು ಕೈ ಹಿಡಿಯುವ ಹುಡುಗ ಹೇಗಿರಬೇಕು ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ‘ತುಂಬಾ ಚೆನ್ನಾಗಿ ಇರಬೇಕು. ಗೌರವ ಕೊಡಬೇಕು. ಒಳ್ಳೆಯವರಾಗಿ ಇರಬೇಕು. ತುಂಬಾ ಇಷ್ಟಪಡಬೇಕು. ಪ್ರೀತಿ ಮಾಡಬೇಕು ಅಷ್ಟೇ’ ಎಂದು ನಿವೇದಿತಾ ಗೌಡ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More