ಕಂಬಳದಲ್ಲಿ ಗೆದ್ದವರಿಗೆ ಅವಮಾನ? ರಕ್ಷಿತಾ ಶೆಟ್ಟಿ ಭಾಷೆ ಕೇಳಿ ಕಂಗಾಲಾದ ಮಲ್ಲಮ್ಮ
ಅ.15ರ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ರಕ್ಷಿತಾ ಶೆಟ್ಟಿ ಕಂಬಳದ ಬಗ್ಗೆ ಮಲ್ಲಮ್ಮನಿಗೆ ವಿವರಿಸಿದ್ದಾರೆ. ‘ಉಡುಪಿಯಲ್ಲಿ ಎಮ್ಮೆಯ ರೇಸ್ ಕಂಬುಳ ಆಗುತ್ತದೆ. ಫಸ್ಟ್ ಬಂದವರಿಗೆ ಅವಮಾನ’ ಎಂದು ಹೇಳಿದ್ದಾರೆ. ಬಹುಮಾನ ಎನ್ನುವ ಬದಲು ರಕ್ಷಿತಾ ಅವರು ಅವಮಾನ ಎಂಬ ಪದ ಬಳಸಿದ್ದನ್ನು ಕೇಳಿ ಮಲ್ಲಮ್ಮ ನಕ್ಕಿದ್ದಾರೆ.
ಯೂಟ್ಯೂಬ್ ಮೂಲಕ ಖ್ಯಾತಿ ಗಳಿಸಿದ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಭಾಷೆ ತುಂಬ ಫನ್ನಿ ಆಗಿದೆ. ಕಷ್ಟಪಟ್ಟು ಕನ್ನಡ ಮಾತನಾಡುತ್ತಾರೆ. ಅದನ್ನು ಕೇಳಿ ಎಲ್ಲರಿಗೂ ನಗು ಬರುತ್ತದೆ. ಅಕ್ಟೋಬರ್ 15ರ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಅವರು ಕಂಬಳದ ಕುರಿತು ಮಲ್ಲಮ್ಮನಿಗೆ ವಿವರಿಸಿದ್ದಾರೆ. ‘ಉಡುಪಿಯಲ್ಲಿ ಎಮ್ಮೆಯ ರೇಸ್ ಕಂಬುಳ ಆಗುತ್ತದೆ. ತುಂಬ ಸ್ಪೀಡ್ ಆಗಿ ಓಡುತ್ತಾರೆ. ಫಸ್ಟ್ ಬಂದವರಿಗೆ ಅವಮಾನ’ ಎಂದು ಹೇಳಿದ್ದಾರೆ. ರಕ್ಷಿತಾ ಅವರು ಬಹುಮಾನ ಎನ್ನುವ ಬದಲು ಅವಮಾನ ಎಂಬ ಪದ ಬಳಕೆ ಮಾಡಿದ್ದನ್ನು ಕೇಳಿ ಮಲ್ಲಮ್ಮ (Mallamma) ಅವರು ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

