ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ

Updated on: May 04, 2025 | 1:25 PM

ಬಾಗಲಕೋಟೆಯಲ್ಲಿಂದು ಕೋಡಿಮಠ ಸ್ವಾಮೀಜಿ ಅವರು ರಾಜ್ಯ ರಾಜಕಾರಣದಲ್ಲಿನ ಬದಲಾವಣೆ ಬಗ್ಗೆ ಮಾರ್ಮಿಕ ಭವಿಷ್ಯ ನುಡಿದಿದ್ದಾರೆ. ಭವಿಷ್ಯದಲ್ಲಿ ಎರಡು ಒಂದು ಯುಗಾದಿ ಭವಿಷ್ಯ,ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾ ಭವಿಷ್ಯ ಪ್ರಕೃತಿಗೆ ಸಂಬಂಧಿಸಿದ್ದು. ಸಂಕ್ರಾಂತಿ ಭವಿಷ್ಯ ರಾಜರಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಹಡಗಿನಲ್ಲಿ ಬರುವಂತವರಿಗೆ ಬರುತ್ತದೆ. ಸಂಕ್ರಾಂತಿವರೆಗೆ ಯಾವ ಬದಲಾವಣೆ ದೋಷ ಕಾಡುತ್ತಿಲ್ಲ. ಇಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ

ಬಾಗಲಕೋಟೆ, (ಮೇ 04):ಬಾಗಲಕೋಟೆಯಲ್ಲಿಂದು ಕೋಡಿಮಠ ಸ್ವಾಮೀಜಿ ಅವರು ರಾಜ್ಯ ರಾಜಕಾರಣದಲ್ಲಿನ ಬದಲಾವಣೆ ಬಗ್ಗೆ ಮಾರ್ಮಿಕ ಭವಿಷ್ಯ ನುಡಿದಿದ್ದಾರೆ. ಭವಿಷ್ಯದಲ್ಲಿ ಎರಡು ಒಂದು ಯುಗಾದಿ ಭವಿಷ್ಯ,ಇನ್ನೊಂದು ಸಂಕ್ರಾಂತಿ ಭವಿಷ್ಯ. ಯುಗಾ ಭವಿಷ್ಯ ಪ್ರಕೃತಿಗೆ ಸಂಬಂಧಿಸಿದ್ದು. ಸಂಕ್ರಾಂತಿ ಭವಿಷ್ಯ ರಾಜರಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಹಡಗಿನಲ್ಲಿ ಬರುವಂತವರಿಗೆ ಬರುತ್ತದೆ. ಸಂಕ್ರಾಂತಿವರೆಗೆ ಯಾವ ಬದಲಾವಣೆ ದೋಷ ಕಾಡುತ್ತಿಲ್ಲ. ಇಲ್ಲಿವರೆಗೂ ರಾಜನ ಬದಲಾವಣೆ ಆಗುವ ಯಾವುದೇ ಸಾಧ್ಯತೆ ಇಲ್ಲ. ಸಂಗಮೇಶ ನಲಿವನೆ‌, ಆದರೆ ‌ಒಳ‌ ಅಡ್ಡ ಬಂದಿದೆ ಬದಲಾವಣೆ ವಿಚಾರದಲ್ಲಿ.

ಹೊಳೆಯನ್ನು ಈಜಿದರೆ ಬದಲಾವಣೆ ಆಗಬಹುದು. ಆ ಶಕ್ತಿ ಇದ್ರೆ. ಈ ಹಿಂದೆಯೇ ಹೇಳಿದ್ದೆ ಹಾಲುಮತದವರಿಗೆ ಅಧಿಕಾರ‌ ಬಂದರೆ ಬಿಡಿಸಿಕೊಳ್ಳೋದು ಕಷ್ಟ ಅವರಾಗಿಯೇ ಬಿಡಬೇಕು. ಯಾಕೆಂದರೆ ವಿಜಯನಗರ ಸಾಮ್ರಾಜ್ಯ ಹಕ್ಕಬುಕ್ಕರು ಕಟ್ಟಿದ್ದು. ಇವತ್ತು ಅದೇ ಚಿಹ್ನೆ ‌ಇರೋದು‌ ಮೈಸೂರು ದಸರಾ ಅದೇ ಚಿಹ್ನೆಯಲ್ಲಿ‌ ನಡೆಯುತ್ತಿರುವುದು. ಹಾಲು ಕೆಟ್ಟರು ಹಾಲು‌ಮತ‌ ಕೆಡುವುದಿಲ್ಲ. ಆಂತವರ‌ ಕೈಲಿ ಅಧಿಕಾರ ಸಿಕ್ಕಿರುವುದರಿಂದ ಬಿಡಿಸೋದು ಕಷ್ಟ. ಅವರಾಗಿಯೇ ಬಿಟ್ರೆ ನಿಮಗೆ ಸಿಗುತ್ತದೆ ಎಂದು ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದರು.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More