Bengaluru News: ಶಾಸಕರ‍್ಯಾರೂ ಸಚಿವರ ವಿರುದ್ಧ ಮುಖ್ಯಮಂತ್ರಿಗಳಿಗೆ ಬರೆದಿಲ್ಲ, ಅದೊಂದು ಸುಳ್ಳು ವದಂತಿ: ಡಿಕೆ ಶಿವಕುಮಾರ್

|

Updated on: Jul 25, 2023 | 4:01 PM

ಸರ್ಕಾರದ ಘೋಷಿತ ಕಾರ್ಯಕ್ರಮಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಬೇಕಿರುವುದರಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡೋದು ಕಷ್ಟವಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರಾಜ್ಯ ಸಚಿವ ಸಂಪುಟದ ಸದಸ್ಯರು ಮತ್ತು ಶಾಸಕರ ನಡುವೆ ಅಸಮಾಧಾನ ತಲೆದೋರಿದೆ, ಸಚಿವರ ವಿರುದ್ಧ ಸುಮಾರು 30 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ (Siddaramaiah) ಪತ್ರ ಬರೆದಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿದರು. ವದಂತಿಗಳೆಲ್ಲ ಸುಳ್ಳು ಯಾರು ಯಾರ ವಿರುದ್ಧವೂ ಪತ್ರ ಬರೆದಿಲ್ಲ ಎಂದು ಹೇಳಿದ ಶಿವಕುಮಾರ್, ವಿಧಾನ ಸಭಾ ಅಧಿವೇಶನ (Assembly Session) ನಡೆಯುತ್ತಿದ್ದ ಕಾರಣ ಎಲ್ಲರೂ ಬ್ಯೂಸಿಯಾಗಿದ್ದರು ಅಲ್ಲದೆ ತಮ್ಮ ಸರ್ಕಾರ ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟ ಹೆಚ್ಚು ಗಮನ ನೀಡಿತ್ತು ಎಂದರು. ಸರ್ಕಾರದ ಘೋಷಿತ ಕಾರ್ಯಕ್ರಮಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸಬೇಕಿರುವುದರಿಂದ ಶಾಸಕರ ಕ್ಷೇತ್ರಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡೋದು ಕಷ್ಟವಾಗುತ್ತಿದೆ. ಶಾಸಕರೆಲ್ಲ ತಲಾ 100, 200, 300 ಕೋಟಿ ರೂ.ಗಳ ಅನುದಾನ ಕೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಇದೊಂದು ವರ್ಷ ಅಭಿವೃದ್ಧಿ ಕಾಮಗಾರಿಗಳನ್ನು ಮುಂದೂಡುವಂತೆ ಹೇಳಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ