Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಡಿಕೆ ಶಿವಕುಮಾರ್ ವಿಶ್ ಮಾಡಿದರೂ ಓದುವುದರಲ್ಲಿ ಮಗ್ನರಾಗಿದ್ದ ಸಿದ್ದರಾಮಯ್ಯ ಮುಖ ಎತ್ತಲಿಲ್ಲ!

Bengaluru News: ಡಿಕೆ ಶಿವಕುಮಾರ್ ವಿಶ್ ಮಾಡಿದರೂ ಓದುವುದರಲ್ಲಿ ಮಗ್ನರಾಗಿದ್ದ ಸಿದ್ದರಾಮಯ್ಯ ಮುಖ ಎತ್ತಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2023 | 3:05 PM

ಶಿವಕುಮಾರ್ ಅ ಬಗ್ಗೆ ತಲೆಕೆಡಿಸಿಕೊಳ್ಳದೆ, ಎಂಬಿ ಪಾಟೀಲ್ ಖಾಲಿ ಮಾಡಿದ ಸಿದ್ದರಾಮಯ್ಯ ಪಕ್ಕದ ಆಸನದಲ್ಲಿ ಕೂರುತ್ತಾರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ನಡುವಿನ ಶೀತಲ ಸಮರಕ್ಕೆ ಇನ್ನೂ ತೆರೆಬಿದ್ದಿಲ್ಲವೇ ಅಥವಾ ಕಾಮಾಲೆಯಾದವರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣುವಂತೆ ನೋಡುಗರಿಗೆ ಅವರ ನಡುವಿನ ವೈಮನಸ್ಸು ಮಾತ್ರ ಕಾಣತ್ತಿದೆಯೇ? ಹೀಗೆ ಹೇಳೋದಿಕ್ಕೆ ಕಾರಣವಿದೆ. ಇಂದು ವಿಧಾನ ಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭ (State Export Excellence Awards) ನಡೆಯಿತು. ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಬರುವ ಶಿವಕುಮಾರ್, ಅದಾಗಲೇ ಬಂದು ಏನನ್ನೋ ಓದುವುದರಲ್ಲಿ ಮಗ್ನರಾಗಿದ್ದ ಸಿದ್ದರಾಮಯ್ಯನವರಿಗೆ ವಿಶ್ ಮಾಡುತ್ತಾರೆ. ಮುಖ್ಯಮಂತ್ರಿ ಪ್ರಾಯಶಃ ಕೇಳಿಸಿಕೊಳ್ಳುವುದಿಲ್ಲ ಅಥವಾ ಓದಿನಲ್ಲಿ ಪೂರ್ಣ ವ್ಯಸ್ತರಾಗಿರುತ್ತಾರೆ. ಶಿವಕುಮಾರ್ ಅ ಬಗ್ಗೆ ತಲೆಕೆಡಿಸಿಕೊಳ್ಳದೆ, ಎಂಬಿ ಪಾಟೀಲ್ ಖಾಲಿ ಮಾಡಿದ ಸಿದ್ದರಾಮಯ್ಯ ಪಕ್ಕದ ಆಸನದಲ್ಲಿ ಕೂರುತ್ತಾರೆ. ಅವರು ಕೂತ ಮೇಲೆ ಸಿದ್ದರಾಮಯ್ಯ ಗಮನ ಅವರ ಕಡೆ ಹರಿಯುತ್ತದೆ. ಒಮ್ಮೆ ಶಿವಕುಮಾರ್ ರನ್ನು ನೋಡಿ ಪುನಃ ಕೈಯಲ್ಲಿ ಹಿಡಿದಿದ್ದ ಕಾಗದಗಳಲ್ಲಿ ಮುಳುಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ