ಸಿಎಂ ಕುರ್ಚಿಗಾಗಿ ಕಿತ್ತಾಟ: ಅಂದಿನ ಶಾಸಕಾಂಗ ಸಭೆಯ ರಹಸ್ಯ ಬಿಚ್ಚಿಟ್ಟ ರಾಯರೆಡ್ಡಿ

Updated on: Nov 24, 2025 | 4:35 PM

ಸರ್ಕಾರ ಎರಡುವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆಯೇ ಇನ್ನುಳಿದ ಅವಧಿಗೆ ಸಿಎಂ ಆಗಬೇಕೆಂದು ಡಿಕೆಶಿ ಹಠಕ್ಕೆ ಬಿದ್ದಿದ್ದಾರೆ. ಈ ಸಂಬಂಧ ಕರ್ನಾಟಕ ಕಾಂಗ್ರೆಸ್​​ನಲ್ಲಿ ಬಣ ರಾಜಕೀಯ ಉಲ್ಬಣವಾಗಿದ್ದು, ಡಿಕೆ ಶಿವಕುಮಾರ್ ಬೆಂಬಲಿಗೆ ಶಾಸಕರು, ದೆಹಲಿ ಪರೇಡ್ ನಡೆಸಿದ್ದಾರೆ. ಇನ್ನು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು, ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದವಾಗಿಲ್ಲ. ಈ ಬಗ್ಗೆ ಅಂದು ನಮಗೆ ಏನು ಹೇಳಿಲ್ಲ ಎಂದು ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಕೊಪ್ಪಳ, (ನವೆಂಬರ್ 24): ಸಿಎಂ ಕುರ್ಚಿಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. 2023ರ ವೇಳೆ ಸರ್ಕಾರ ರಚನೆ ವೇಳೆಯಲ್ಲೇ ಡಿಕೆ ಶಿವಕುಮಾರ್ ತಮ್ಮನ್ನು ಸಿಎಂ ಮಾಡಬೇಕೆಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದರು.ಬಳಿಕ ಹೈಕಮಾಂಡ್ ಸಮಾಧಪಡಿಸಿ ಸಿದ್ದರಾಮಯ್ಯನವರನ್ನು ಸಿಎಂ ಆಗಿ ಆಯ್ಕೆ ಮಾಡಿತ್ತು. ಇದೀಗ ಸರ್ಕಾರ ಎರಡುವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆಯೇ ಇನ್ನುಳಿದ ಅವಧಿಗೆ ಸಿಎಂ ಆಗಬೇಕೆಂದು ಡಿಕೆಶಿ ಹಠಕ್ಕೆ ಬಿದ್ದಿದ್ದಾರೆ. ಈ ಸಂಬಂಧ ಕರ್ನಾಟಕ ಕಾಂಗ್ರೆಸ್​​ನಲ್ಲಿ ಬಣ ರಾಜಕೀಯ ಉಲ್ಬಣವಾಗಿದ್ದು, ಡಿಕೆ ಶಿವಕುಮಾರ್ ಬೆಂಬಲಿಗೆ ಶಾಸಕರು, ದೆಹಲಿ ಪರೇಡ್ ನಡೆಸಿದ್ದಾರೆ. ಇನ್ನು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು, ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದವಾಗಿಲ್ಲ. ಈ ಬಗ್ಗೆ ಅಂದು ನಮಗೆ ಏನು ಹೇಳಿಲ್ಲ ಎಂದು ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡಿದ್ದಾರೆ.

ಕೊಪ್ಪಳದಲ್ಲಿಂದು ಮಾತನಾಡಿದ ರಾಯರೆಡ್ಡಿ. CLP ಸಭೆಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಯಾರೂ ಹೇಳಿಲ್ಲ. ಒಂದು ವೇಳೆ ಎರಡುವರೆ ವರ್ಷ ಎರಡುವರೆ ವರ್ಷ ಒಪ್ಪಂದ ಆಗಿದ್ದರೆ ನಮಗೆ ಆಗಲೇ ಹೇಳಬೇಕಿತ್ತಲ್ವಾ? ನಾನು ವೋಟ್ ಹಾಕಿದ್ದೇನೆ, ನಮಗೆ ಯಾರೂ ಹೇಳಿಲ್ಲ. ಒಮ್ಮೆ ಎಲೆಕ್ಟ್ ಆದ್ರೆ ಸಿದ್ದರಾಮಯ್ಯ 5 ವರ್ಷ ಇರ್ತಾರೆ. ಒಬ್ಬ ಮುಖ್ಯಮಂತ್ರಿಯನ್ನು ಸುಮ್ಮನೆ ತೆಗೆಯೋಕೆ ಆಗಲ್ಲ. ಸಿಎಂ ತೆಗೆಯಬೇಕಂದ್ರೆ ಭ್ರಷ್ಟಾಚಾರದ ಆರೋಪವಿರಬೇಕು. ಇಲ್ಲವೇ ಸಿಎಂ ಜನ ವಿರೋಧಿ ಕೆಲಸವನ್ನ ಮಾಡಿರಬೇಕು ಎಂದರು.

ಈ ಮೂಲಕ ಪರೋಕ್ಷವಾಗಿ ರಾಯರೆಡ್ಡಿ ,  ಅಧಿಕಾರ ಹಂಚಿಕೆ ಬಗ್ಗೆ ಈ ಹಿಂದೆ ಸರ್ಕಾರ ರಚನೆ ವೇಳೆ ಶಾಸಕಾಂಗ ಸಭೆಯಲ್ಲಿ ಯಾವುದೇ ಒಪ್ಪಂದ ಆಗಿಲ್ಲ. ಹೀಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.