ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?

|

Updated on: Oct 21, 2024 | 6:11 PM

ಉದ್ಯೋಗ ಕಳೆದುಕೊಂಡ ನಂತರ ನೊಯ್ಡಾದ ಯುವಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸಾಯುವ ನಿರ್ಧಾರ ಮಾಡಿದ 12ನೇ ಮಹಡಿಯ ಬಾಲ್ಕನಿಯಲ್ಲಿ ನೇತಾಡುತ್ತಿದ್ದ ಆತನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪಾರ್ಟ್​ಮೆಂಟ್​ನ ನಿವಾಸಿಗಳು ಆತನಿಗೆ ಹಾರಬೇಡ ಎಂದು ಕಿರುಚುತ್ತಾ, ಗೋಗರೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ನೋಯ್ಡಾ: ಉದ್ಯೋಗ ಕಳೆದುಕೊಂಡ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಯುವಕ ನೋಯ್ಡಾದಲ್ಲಿ ಅಪಾರ್ಟ್​ಮೆಂಟ್​ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ಅಪಾರ್ಟ್​ಮೆಂಟ್​ನ ನಿವಾಸಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ