AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳು ಕಳೆದರೂ ಜಮೀರ್ ವಿರುದ್ಧ ಕ್ರಮಕ್ಕೆ ಮುಂದಾಗದ ಎಜಿಯನ್ನು ವಜಾ ಮಾಡಬೇಕು: ಅಬ್ರಹಾಂ

ತಿಂಗಳು ಕಳೆದರೂ ಜಮೀರ್ ವಿರುದ್ಧ ಕ್ರಮಕ್ಕೆ ಮುಂದಾಗದ ಎಜಿಯನ್ನು ವಜಾ ಮಾಡಬೇಕು: ಅಬ್ರಹಾಂ

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk|

Updated on:Oct 22, 2024 | 9:53 AM

Share

ಸಚಿವ ಜಮೀರ್ ಹೇಳಿಕೆ ನೀಡಿ ತಿಂಗಳು ಕಳೆದರೂ ಯಾವುದೇ ಕ್ರಮಕ್ಕೆ ಮುಂದಾಗದ ಅಡ್ವೋಕೇಟ್ ಜನರಲ್ ವಿರುದ್ಧ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಬೇಕೆಂದು ಅಬ್ರಹಾಂ ಆಗ್ರಹಿಸಿದರು. ತಾವು ಸಲ್ಲಿಸಿದ ದೂರಿನ ಪ್ರತಿಯನ್ನು ಎಜಿಯವರಿಗೆ ನೀಡಿ ಅದನ್ನು ಪರಿಗಣಿಸುವಂತೆ ಗವರ್ನರ್ ಹೇಳಬೇಕು ಇಲ್ಲವೇ ಆರ್ಟಿಕಲ್ 165ರ ಪ್ರಕಾರ ಎಜಿಯನ್ನು ಹುದ್ದೆಯಿಂದ ವಜಾ ಮಾಡಬೇಕೆಂದು ಅಬ್ರಹಾಂ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯನವರ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಕಳೆದ ತಿಂಗಳು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ನೀಡಿದ ಹೇಳಿಕೆ ಅವರಿಗೆ ಕಂಟಕವಾಗಲಿದೆಯೇ? ಹೌದು, ಯಾಕೆಂದರೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಸಚಿವನ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಇವತ್ತು ರಾಜ್ಯಪಾಲರ ಮನವಿ ಸಲ್ಲಿಸಿದ್ದಾರೆ. ಸಚಿವನ ಹೇಳಿಕೆ ಘೋರ ನ್ಯಾಯಾಂಗ ನಿಂದನೆಯನ್ನು ಬಿಂಬಿಸುತ್ತದೆ ಎಂದು ಅಬ್ರಹಾಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್ ಅಹ್ಮದ್ ಖಾನ್

Published on: Oct 21, 2024 07:17 PM