ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್
ಗಾಯಕ ಹನುಮಂತ ಈಗ ಬಿಗ್ ಬಾಸ್ ಸ್ಪರ್ಧಿ. ಆತನ ಮುಗ್ಧತೆ ಕಂಡು ಧನರಾಜ್ ಸಹಾಯಕ್ಕೆ ಬಂದಿದ್ದಾರೆ. ವೆಸ್ಟರ್ನ್ ಟಾಯ್ಲೆಟ್ ಬಳಸುವುದು ಹೇಗೆ ಎಂದು ಹನುಮಂತನಿಗೆ ಧನರಾಜ್ ಹೇಳಿಕೊಟ್ಟಿದ್ದಾರೆ. ಈ ಟಾಯ್ಲೆಟ್ ಪಾಠ ಮಧ್ಯರಾತ್ರಿಯಲ್ಲಿ ನಡೆದಿದೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.
ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು? ಹೇಗೆ ಫ್ಲಶ್ ಮಾಡಬೇಕು ಎಂಬುದು ಹನುಮಂತನಿಗೆ ತಿಳಿದಿಲ್ಲ. ಹಾಗಾಗಿ ಅವರಿಗೆ ಧನರಾಜ್ ಪಾಠ ಮಾಡಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿದ ನಂತರ ಈ ಪ್ರಸಂಗ ನಡೆದಿದೆ. ಅದರ ಪ್ರೋಮೋ ನೋಡಿದ ವೀಕ್ಷಕರು ನಕ್ಕು ನಕ್ಕು ಸುಸ್ತಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಹನುಮಂತ ಸ್ಪರ್ಧಿಸುತ್ತಿದ್ದಾರೆ. ಅವರು ಹಂಗಾಮಿ ಕ್ಯಾಪ್ಟನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos