ಹಾಸನದ ನೊರನಕ್ಕಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪೋಟೋ ಹಾಕಿದ್ದಕ್ಕೆ ಗಲಾಟೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 22, 2021 | 9:22 PM

ಬಿಜೆಪಿ ಸದಸ್ಯೆಯೊಬ್ಬರು, ಒಬ್ಬ ಉತ್ತರ ಭಾರತೀಯನ ಫೋಟೋ ಇಲ್ಲಿ ಹಾಕುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾ ಪ್ರಧಾನಿಗಳಿಗೆ ಅವಮಾನ ಮಾಡಿದ್ದಾರೆ, ಅಧಿಕಾರಿ ವರ್ಗದವರೆಲ್ಲ ಫೋಟೋ ಹಾಕಲು ಅಡ್ಡಿ ಪಡಿಸಿದ್ದಾರೆಂದು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಜೆಡಿಎಸ್ ಪಕ್ಷದ ಪ್ರಮುಖ ನಾಯಕ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪುತ್ರ ಹೆಚ್ ಡಿ ರೇವಣ್ಣ ಅವರ ಕ್ಷೇತ್ರ ಚನ್ನರಾಯಪಟ್ಟಣದ ಭಾಗವಾಗಿರುವ ನೊರನಕ್ಕಿ ಗ್ರಾಮ ಪಂಚಾಯಿತಿ ಕಚೇರಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಸಂಬಂಧಿಸಿದಂತೆ ವಿವಾದದ ಕೇಂದ್ರವಾಗಿದೆ. ಮೋದಿಯವರ ಹುಟ್ಟುಹಬ್ಬ ಸೆಪ್ಟೆಂಬರ್ 17 ರಂದು ಪಂಚಾಯಿತಿಯ ಬಿಜೆಪಿ ಸದಸ್ಯರು ಪ್ರಧಾನಿಯವರ ಫೋಟೋವನ್ನು ಪಂಚಾಯಿತಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಫೋಟೋ ಪಕ್ಕ ಅಳವಡಿಸಿದ್ದಾರೆ.

ಅವರ ಈ ಕ್ರಮ ಪಂಚಾಯಿತಿ ಪಿಡಿಓ ಮತ್ತು ಕೆಲ ಜೆಡಿಎಸ್ ಸದಸ್ಯರಿಗೆ ಸರಿಕಂಡಿಲ್ಲ. ಅವರು ವಿರೋಧ ವ್ಯಕ್ತಪಡಿಸಿದಾಗ ಗಲಾಟೆ ಶುರುವಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಿಡಿಓ ಅವರು, ಮೋದಿಯವರ ಪೋಟೋ ಹಾಕಿವುದು ಬೇಡವೆಂದರೂ ಹಾಕಿದ್ದಾರೆ, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಸುಮಾರು 20 ಸದಸ್ಯರ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೋಟೋ ಹಾಕಿದ ಸದಸ್ಯರು ಸಹ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದು ಪಿಡಿಓ ವಿರುದ್ಧ ಜಾತಿನಿಂದನೆಯ ಆರೋಪ ಹೊರಿಸಲಾಗಿದೆ. ಬಿಜೆಪಿ ಸದಸ್ಯೆಯೊಬ್ಬರು, ಒಬ್ಬ ಉತ್ತರ ಭಾರತೀಯನ ಫೋಟೋ ಇಲ್ಲಿ ಹಾಕುವ ಅವಶ್ಯಕತೆ ಇಲ್ಲ ಎಂದು ಹೇಳುತ್ತಾ ಪ್ರಧಾನಿಗಳಿಗೆ ಅವಮಾನ ಮಾಡಿದ್ದಾರೆ, ಅಧಿಕಾರಿ ವರ್ಗದವರೆಲ್ಲ ಫೋಟೋ ಹಾಕಲು ಅಡ್ಡಿ ಪಡಿಸಿದ್ದಾರೆಂದು ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೊರನಕ್ಕಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ ಪೊಲೀಸರು ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ:  ಮಲಗಿದ್ದ ಹೆಂಡತಿ ಮುಖಕ್ಕೆ ಕಪ್ಪು ಮಸಿ ಹಚ್ಚೋಕೆ ಮುಂದಾಗಿದ್ದ ಗಂಡನ ಅವಸ್ಥೆ ನೋಡಿ! ತಮಾಷೆ ವಿಡಿಯೋ ವೈರಲ್