ಕಿಲಾರಿ ಎತ್ತುಗಳನ್ನು ಹೊಂದುವುದು ಶ್ರೀಮಂತಿಕೆ ಮತ್ತು ಪ್ರತಿಷ್ಠೆಯ ಸಂಕೇತ, ಉತ್ತರ ಕರ್ನಾಟಕದಲ್ಲಿ ಇವುಗಳಿಗೆ ಭಾರಿ ಬೇಡಿಕೆ!

ಕಿಲಾರಿ ಎತ್ತುಗಳನ್ನು ಹೊಂದುವುದು ಶ್ರೀಮಂತಿಕೆ ಮತ್ತು ಪ್ರತಿಷ್ಠೆಯ ಸಂಕೇತ, ಉತ್ತರ ಕರ್ನಾಟಕದಲ್ಲಿ ಇವುಗಳಿಗೆ ಭಾರಿ ಬೇಡಿಕೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 22, 2021 | 10:28 PM

ಬಾಗಲಕೋಟೆ, ವಿಜಯಪುರ ಮತ್ತು ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕಿಲಾರಿ ಎತ್ತುಗಳಿಗೆ ಭಾರಿ ಬೇಡಿಕೆಯಿದೆ. ವಿಜಯಪುರ, ತೇರದಾಳ, ಅಮೀನಗಡ, ಬಾಗಲಕೋಟೆ ಮತ್ತು ಬೆಳಗಾವಿಯ ಅನೇಕ ಕಡೆಗಳಲ್ಲಿ ದನಕರುಗಳ ಸಂತೆ ನಿಯಮಿತವಾಗಿ ನಡೆಯುತ್ತಿರುತ್ತವೆ.

ಕಿಲಾರಿ ಎತ್ತು ಅಥವಾ ಹೋರಿಗಳ ಖದರೇ ಹಾಗೆ. ಉತ್ತರ ಕರ್ನಾಕದಲ್ಲಿ ರೈತನೊಬ್ಬ ತನ್ನ ಕೊಟ್ಟಿಗೆಯಲ್ಲಿ ಕಿಲಾರಿ ಎತ್ತುಗಳನ್ನು ಕಟ್ಟಿರುವನೆಂದರೆ ಮನೆಯಲ್ಲಿ ದುಬಾರಿ ಕಾರು ಇಟ್ಟುಕೊಂಡಿದ್ದಾನೆ ಅಂತಲೇ ಅರ್ಥ. ಹಣದ ಮಾತು ಹಾಗಿರಲಿ, ಅವುಗಳನ್ನು ಹೊಂದುವುದು ಒಂದು ಪ್ರತಿಷ್ಠೆಯ ಸಂಕೇತ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಕೇವಲ ಸ್ಥಿತಿವಂತ ರೈತ ಮಾತ್ರ ಕಿಲಾರಿ ಎತ್ತುಗಳನ್ನು ತನ್ನೊಂದಿಗೆ ಇಟ್ಟುಕೊಳ್ಳಬಲ್ಲ. ಈ ವಿಡಿಯೋ ನೋಡಿದರೆ ನಾವು ಯಾಕೆ ಹಾಗೆ ಹೇಳುತ್ತಿದ್ದೇವೆ ಅನ್ನೋದು ನಿಮಗೆ ಅರ್ಥವಾಗುತ್ತದೆ.

ಇಲ್ಲಿ ನಿಮಗೆ ಕಾಣುತ್ತಿರೋದೇ ಕಿಲಾರಿ ಹೋರಿ. ಸದೃಢ ಮೈಕಟ್ಟು ಮತ್ತು ಅರಡಿ ಎತ್ತರದ ಹೋರಿಯನ್ನು ನೋಡುತ್ತಿದ್ದರೆ, ನಮ್ಮಲ್ಲೂ ಇಂಥದೊಂದಿದ್ದರೆ ಅಂತ ಅನಿಸದಿರದು. ಅದರ ನಿಲುವು, ಗಂಭೀರ ನಡಿಗೆ, ಮೈ ನವಿರೇಳಿಸುವ ಓಟ ಎಲ್ಲವೂ ಕಣ್ಣಿಗೆ ಹಬ್ಬ. ಕೆಲಸದಲ್ಲೂ ಈ ಎತ್ತುಗಳು ಮುಂದು, ದಣಿವರಿಯದೆ ದುಡಿಯುತ್ತವೆ.

ಬಾಗಲಕೋಟೆ, ವಿಜಯಪುರ ಮತ್ತು ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕಿಲಾರಿ ಎತ್ತುಗಳಿಗೆ ಭಾರಿ ಬೇಡಿಕೆಯಿದೆ. ವಿಜಯಪುರ, ತೇರದಾಳ, ಅಮೀನಗಡ, ಬಾಗಲಕೋಟೆ ಮತ್ತು ಬೆಳಗಾವಿಯ ಅನೇಕ ಕಡೆಗಳಲ್ಲಿ ದನಕರುಗಳ ಸಂತೆ ನಿಯಮಿತವಾಗಿ ನಡೆಯುತ್ತಿರುತ್ತವೆ. ಬೇರೆ ಬೇರೆ ತಳಿಯ ಎತ್ತುಗಳೊಂದಿಗೆ ಕಿಲಾರಿ ತಳಿಯ ಹೋರಿಗಳ ಮಾರಾಟ-ಖರೀದಿ ಅಲ್ಲಿ ನಡೆಯುತ್ತದೆ.

ತೇರದಾಳದ ಬೀಮಪ್ಪ ಎನ್ನುವವರು ತಮ್ಮಲ್ಲಿದ್ದ ಕಿಲಾರಿ ಹೋರಿಯನ್ನು ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಅಶೋಕ ಕುರಿ ಎನ್ನುವವರಿಗೆ ರೂ 3.25 ಲಕ್ಷಕ್ಕೆ ಮಾರಿದ್ದಾರೆ! ಮಾರಿದವರೂ ಖುಷ್ ಖರೀದಿಸಿದವರೂ ಖುಷ್. ಅದಕ್ಕೇ ನಾವು ಹೇಳಿದ್ದು-ಕಿಲಾರಿ ಎತ್ತುಗಳ ಖದರೇ ಬೇರೆ ಅಂತ!!

ಇದನ್ನೂ ಓದಿ:  ವಿಜಯಪುರ: ಆಕಳಿಗೆ ಸೀಮಂತ; ಅಪರೂಪದ ಸಂಪ್ರದಾಯ ಆಚರಣೆ- ವಿಡಿಯೋ ನೋಡಿ