ವಿಜಯಪುರ: ಆಕಳಿಗೆ ಸೀಮಂತ; ಅಪರೂಪದ ಸಂಪ್ರದಾಯ ಆಚರಣೆ- ವಿಡಿಯೋ ನೋಡಿ
Vijayapura News: ಕರಡಿ ಮಜಲು ವಾದ್ಯದೊಂದಿಗೆ ಸೀಮಂತ ಕಾರ್ಯ ನಡೆದಿದೆ. ಮುತ್ತೈದೆಯರು ಆಕಳಿಗೆ ಹೊಸ ಸೀರೆ ಉಡಿಸಿ, ಆರತಿ ಬೆಳಗಿದ್ದಾರೆ. ಕುಟುಂಬದವರು ಆಕಳಿಗೆ ಸಹಿ ಖಾದ್ಯ ತಿನ್ನಿಸಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿ ಒಂದು ಕುಟುಂಬ ಅಪರೂಪದ ಸಂಪ್ರದಾಯ ಆಚರಣೆ ಮಾಡಿ ಸುದ್ದಿ ಆಗಿದೆ. ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಹೂಗಾರ ಕುಟುಂಬ ಆಕಳಿಗೆ ಸೀಮಂತ ಕಾರ್ಯ ಮಾಡಿದೆ. ರೈತ ಗಿರೀಶ ಹೂಗಾರ ಕುಟುಂಬದವರಿಂದ ಆಕಳಿಗೆ ಸೀಮಂತ ಕಾರ್ಯ ಮಾಡಲಾಗಿದೆ. ಸಾಕಿದ ಆಕಳು ಮೊದಲ ಬಾರಿ ಗರ್ಭಧಿಸಿರೋ ಕಾರಣ ಈ ಕಾರ್ಯಕ್ರಮ ನಡೆಸಲಾಗಿದೆ.
ಕರಡಿ ಮಜಲು ವಾದ್ಯದೊಂದಿಗೆ ಸೀಮಂತ ಕಾರ್ಯ ನಡೆದಿದೆ. ಮುತ್ತೈದೆಯರು ಆಕಳಿಗೆ ಹೊಸ ಸೀರೆ ಉಡಿಸಿ, ಆರತಿ ಬೆಳಗಿದ್ದಾರೆ. ಕುಟುಂಬದವರು ಆಕಳಿಗೆ ಸಹಿ ಖಾದ್ಯ ತಿನ್ನಿಸಿದ್ದಾರೆ. ಹೂಗಾರ ಕುಟುಂಬದವರು ಮನೆ ಮಗಳಿಗೆ ಮಾಡುವ ಸೀಮಂತ ನಿಯಮಗಳಂತೆ ಆಕಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ರೆಡ್ ಬುಲ್ ಪಕ್ಷಿ ಮರಿಗಳಿಗೆ ಆಹಾರ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್