ಉಜ್ವಲಾ ಯೋಜನೆ ಅಡಿ ಸಿಲಿಂಡರ್ ಸಿಗದಿದ್ದರೂ ಕೇಂದ್ರ ಸಚಿವ ಸೋಮ ಪ್ರಕಾಶ್​ಗೆ  ಹಿಂಡಲಗಾದ ಅಜ್ಜಿ ಚೆನ್ನಾಗಿ ಉಪಚರಿಸಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 29, 2022 | 5:53 PM

ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ರಾಜ್ಯ ಸಚಿವ ಸೋಮಪ್ರಕಾಶ್ ಅವರು ಕೇಂದ್ರದ ವಿವಿಧ ಯೋಜನೆಗಳ ಸ್ಥಿತಿ ಗತಿ ಅರಿಯಲು ಸದರಿ ಗ್ರಾಮಕ್ಕೆ ಭೇಟಿ ವೃದ್ಧೆಯ ಮನೆಗೆ ಹೋದಾಗ ತನಗೆ ಉಜ್ವಲಾ ಯೋಜನೆ ಅಡಿಯಲ್ಲಿ ಸಿಲಿಂಡರ್ ಸಿಗಲಿಲ್ಲ ಅಂತ ಅವರಿಗೆ ಹೇಳಿದರೂ ಉಪಚರಿಸುವುದರಲ್ಲಿ ಯಾವುದೇ ಕಮ್ಮಿ ಮಾಡಲಿಲ್ಲ.

Belagavi:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉಜ್ವಲಾ ಯೋಜನೆ (Ujjwala Yojana) ಅಡಿಯಲ್ಲಿ ಬಡತನರೇಖೆಗಿಂತ ಕೆಳಗಿರುವ ಅನೇಕ ಕುಟುಂಬಗಳ ಗೃಹಿಣಿಯರು (housewives) ಅಡುಗೆ ಅನಿಲದ ಸಿಲಿಂಡರ್ಗಳನ್ನು (gas cylinder) ಪಡೆದರು. ಆದರೆ, ಈ ಯೋಜನೆಯಡಿ ಪಲಾನುಭವಿಗಳಾಗದವರು ಸಹ ಸಾಕಷ್ಟು ಸಂಖ್ಯೆಯ ಮಹಿಳೆಯರಿದ್ದಾರೆ. ಅವರಲ್ಲಿ ಒಬ್ಬರು, ಬೆಳಗಾವಿಯ ಹಿಂಡಲಗಾ ಗ್ರಾಮದ 87-ವರ್ಷ-ವಯಸ್ಸಿನ ಈ ವೃದ್ಧೆ.

ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ರಾಜ್ಯ ಸಚಿವ ಸೋಮಪ್ರಕಾಶ್ ಅವರು ಕೇಂದ್ರದ ವಿವಿಧ ಯೋಜನೆಗಳ ಸ್ಥಿತಿ ಗತಿ ಅರಿಯಲು ಸದರಿ ಗ್ರಾಮಕ್ಕೆ ಭೇಟಿ ವೃದ್ಧೆಯ ಮನೆಗೆ ಹೋದಾಗ ತನಗೆ ಉಜ್ವಲಾ ಯೋಜನೆ ಅಡಿಯಲ್ಲಿ ಸಿಲಿಂಡರ್ ಸಿಗಲಿಲ್ಲ ಅಂತ ಅವರಿಗೆ ಹೇಳಿದರೂ ಉಪಚರಿಸುವುದರಲ್ಲಿ ಯಾವುದೇ ಕಮ್ಮಿ ಮಾಡಲಿಲ್ಲ. ಅಜ್ಜಿ ಅವರಿಗೆ ರೊಟ್ಟಿ, ಜನುಕದ ವಡೆ, ಅನ್ನ-ಸಾಂಬಾರು ಮೊಸರು ಬಡಿಸಿ ಹೊಟ್ಟೆ ತುಂಬಿಸಿ ಕಳಿಸಿದರು. ಅವರೊಂದಿಗೆ ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ಇದ್ದರು.

ಇದನ್ನೂ ಓದಿ:

Published on: Jun 29, 2022 05:51 PM