ನನ್ನ ತಂದೆ ವರುಣಾದಿಂದ ಸ್ಪರ್ಧಿಸಬಯಸಿದರೆ ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುವೆ: ಡಾ ಯತೀಂದ್ರ ಸಿದ್ದರಾಮಯ್ಯ
ಹತ್ತಿರದ ಕ್ಷೇತ್ರ ಆರಿಸಿಕೊಂಡರೆ ಕ್ಷೇತ್ರದಲ್ಲಿನ ಕೆಲಸಗಳಿಗಾಗಿ ಸುಲಭವಾಗಿ ಓಡಾಡಬಹುದು ಅಂತ ಅವರು ಹೇಳಿದರು. ಅವರೇನಾದರೂ ವರುಣಾದಿಂದ ಸ್ಪರ್ಧಿಸಲು ಬಯಸಿದರೆ ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುವುದಾಗಿ ಯತೀಂದ್ರ ಹೇಳಿದರು.
Mysuru: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯಾಕೆ ಬೆಂಗಳೂರು ಸುತ್ತಮುತ್ತಲಿನ ಕ್ಷೇತ್ರ ಬಯಸುತ್ತಿದ್ದಾರೆ ಅನ್ನೊದನ್ನ ಅವರ ಮಗ ಹಾಗೂ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ (Dr Yatindra Siddaramaiah) ಅವರು ಮೈಸೂರಲ್ಲಿ ಇಂದು ಸ್ಪಷ್ಟಪಡಿಸಿದರು. ಅವರ ಆರೋಗ್ಯ ಈಗ ಮೊದಲಿನಂತಿರದ ಕಾರಣ ಉತ್ತರ ಕರ್ನಾಟಕದವರೆಗೆ ಓಡಾಡುವುದು ಕಷ್ಟವಾಗುತ್ತದೆ. ಹಾಗಾಗಿ, ಹತ್ತಿರದ ಕ್ಷೇತ್ರ ಆರಿಸಿಕೊಂಡರೆ ಕ್ಷೇತ್ರದಲ್ಲಿನ ಕೆಲಸಗಳಿಗಾಗಿ ಸುಲಭವಾಗಿ ಓಡಾಡಬಹುದು ಅಂತ ಅವರು ಹೇಳಿದರು. ಅವರೇನಾದರೂ ವರುಣಾದಿಂದ (Varuna) ಸ್ಪರ್ಧಿಸಲು ಬಯಸಿದರೆ ಸಂತೋಷದಿಂದ ಕ್ಷೇತ್ರ ಬಿಟ್ಟುಕೊಡುವುದಾಗಿ ಯತೀಂದ್ರ ಹೇಳಿದರು.
ಇದನ್ನೂ ಓದಿ: ಒಂದೇ ಸ್ಕೂಟರ್ ಮೇಲೆ ಇಬ್ಬರು ಸವಾರರೊಂದಿಗೆ 7 ಕುರಿಗಳು! ತಮಾಷೆ ಅಲ್ಲ ಮಾರಾಯ್ರೇ, ವಿಡಿಯೋ ನೋಡಿ
Published on: Jun 29, 2022 07:09 PM
Latest Videos