ಕೋಲಾರ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರವಿಲ್ಲ, ದೆಹಲಿ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ: ಎಸ್ ಮುನಿಸ್ವಾಮಿ, ಸಂಸದ

|

Updated on: Mar 23, 2024 | 5:31 PM

ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರ ಗುರಿ ಮತ್ತು ಉದ್ದೇಶ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ನೋಡುವುದು, ಮತ್ತು ಹಿಂದೂ ವಿರೋಧಿ, ಧರ್ಮ ವಿರೋಧಿ ರಾಷ್ಟ್ರ ವಿರೋಧಿ ಹಾಗೂ ಕೇವಲ ಒಂದು ಸಮುದಾಯನ್ನು ಓಲೈಸುವುದೇ ರಾಜಕಾರಣ ಅಂತ ಭಾವಿಸಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಾಗಿದೆ ಎದು ಮುನಿಸ್ವಾಮಿ ಹೇಳಿದರು.

ದೆಹಲಿ: ಕೋಲಾರ ಸಂಸದ ಎಸ್ ಮುನಿಸ್ವಾಮಿ (S Muniswamy) ತ್ಯಾಗ ಬಲಿದಾನಗಳ ಮಾತಾಡುತ್ತಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರವನ್ನು (Kolar LS seat) ಜೆಡಿಎಸ್ ಪಕ್ಷಕ್ಕೆ ಬಿಟ್ಟಿಕೊಡಲು ಬಿಜೆಪಿ ಹೈಕಮಾಂಡ್ (BJP high command) ತೀರ್ಮಾನಿಸಿರುವುದರಿಂದ ಮುನಿಸ್ವಾಮಿಗೆ ಈ ಬಾರಿ ಸ್ಪರ್ಧಿಸುವ ಅವಕಾಶವಿಲ್ಲ. ದೆಹಲಿಯಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮುನಿಸ್ವಾಮಿ, ತಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು. ನಾಯಕರ ತ್ಯಾಗ ಬಲಿದಾನಗಳಿಂದಾಗೇ ಬಿಜೆಪಿ ಪಕ್ಷ ಇಂದು ಭಾರತದ 17 ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿದೆ ಮತ್ತ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಮುನಿಸ್ವಾಮಿ ಹೇಳಿದರು. ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರ ಗುರಿ ಮತ್ತು ಉದ್ದೇಶ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ನೋಡುವುದು, ಮತ್ತು ಹಿಂದೂ ವಿರೋಧಿ, ಧರ್ಮ ವಿರೋಧಿ ರಾಷ್ಟ್ರ ವಿರೋಧಿ ಹಾಗೂ ಕೇವಲ ಒಂದು ಸಮುದಾಯನ್ನು ಓಲೈಸುವುದೇ ರಾಜಕಾರಣ ಅಂತ ಭಾವಿಸಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದಾಗಿದೆ ಎದು ಮುನಿಸ್ವಾಮಿ ಹೇಳಿದರು. ಕೋಲಾರ ಕ್ಷೇತ್ರದ ಟಿಕೆಟ್ ಬಿಜೆಪಿ ತಾನೇ ಉಳಿಸಿಕೊಂಡಿದ್ದರೂ ಮುನಿಸ್ವಾಮಿಗೆ ಕೊಡುತ್ತಿರಲಿಲ್ಲ ಎಂದ ಕೋಲಾರದ ಮಾತಾಡಿಕೊಳ್ಳುತ್ತಿರುವುದು ಹಾಲಿ ಸಂಸದನಿಗೆ ಗೊತ್ತಿರದ ವಿಷಯವೇನಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:  ಸುಮಲತಾಗೆ ಬಿಜೆಪಿ ಹೈಕಮಾಂಡ್ ಬುಲಾವ್; ಕುತೂಹಲ ಕೆರಳಿಸಿದ ವರಿಷ್ಠರ ಕರೆ