ಇದಪ್ಪ ರೂಲ್ಸ್ ಅಂದ್ರೆ: ಸಿಎಂ ಸಿದ್ದರಾಮಯ್ಯ ಹೊಸ ಮನೆಗೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ

Edited By:

Updated on: Nov 21, 2025 | 8:31 PM

ರೂಲ್ಸ್​ ಅಂದ್ರೆ ರೂಲ್ಸ್​ ದೇಶದ ಪ್ರತಿ ಪ್ರಜೆಗೂ ಒಂದೇ ರೂಲ್ಸ್​. ಮುಖ್ಯಮಂತ್ರಿ (Chief Minister) ಆಗ್ಲಿ ಮಿನಿಸ್ಟರ್​ ಆಗಲಿ ಎಲ್ಲರಿಗೂ ಸಹ ಒಂದೇ ರೂಲ್ಸ್​ ಅನ್ವಯ. ಇದನ್ನು ಏಕೆ ಹೇಳುತ್ತಿದ್ದೇವೆ ಅಂದ್ರೆ ಮೈಸೂರಿನ ಕುವೆಂಪು ನಗರದಲ್ಲಿ (Kuvempu Nagara) ನಿರ್ಮಾಣಗೊಂಡಿರುವ ಸಿದ್ದರಾಮಯ್ಯ (Siddaramaiah) ಅವರ ಹೊಸ ನಿವಾಸಕ್ಕೆ  ವಿದ್ಯುತ್​​ ​ಸಂಪರ್ಕಕ್ಕೆ ತೊಡಕು ಉಂಟಾಗಿದೆ.

ಮೈಸೂರು (ನವೆಂಬರ್ 21): ರೂಲ್ಸ್​ ಅಂದ್ರೆ ರೂಲ್ಸ್​ ದೇಶದ ಪ್ರತಿ ಪ್ರಜೆಗೂ ಒಂದೇ ರೂಲ್ಸ್​. ಮುಖ್ಯಮಂತ್ರಿ (Chief Minister) ಆಗ್ಲಿ ಮಿನಿಸ್ಟರ್​ ಆಗಲಿ ಎಲ್ಲರಿಗೂ ಸಹ ಒಂದೇ ರೂಲ್ಸ್​ ಅನ್ವಯ. ಇದನ್ನು ಏಕೆ ಹೇಳುತ್ತಿದ್ದೇವೆ ಅಂದ್ರೆ ಮೈಸೂರಿನ ಕುವೆಂಪು ನಗರದಲ್ಲಿ (Kuvempu Nagara) ನಿರ್ಮಾಣಗೊಂಡಿರುವ ಸಿದ್ದರಾಮಯ್ಯ (Siddaramaiah) ಅವರ ಹೊಸ ನಿವಾಸಕ್ಕೆ  ವಿದ್ಯುತ್​​ ​ಸಂಪರ್ಕಕ್ಕೆ ತೊಡಕು ಉಂಟಾಗಿದೆ. ಇದಕ್ಕೆ ಕಾರಣ ಸುಪ್ರೀಂಕೋರ್ಟಿನ ಆದೇಶ. ಹೌದು… ಹೊಸ ಮನೆಗೆ ವಿದ್ಯುತ್ ನೀರು ಸಂಪರ್ಕಕ್ಕೆ ಓಸಿ (ಸ್ಚಾಧೀನಾನುಭವ ಪ್ರಮಾಣಪತ್ರ) ಕಡ್ಡಾಯವಾಗಿದೆ. ಇದು ಸುಪ್ರೀಂಕೋರ್ಟಿನ ಆದೇಶ. ಇದೀಗ ಈ ಹೊಸ ರೂಲ್ಸ್​ ಸಿಎಂ ಸಿದ್ದರಾಮಯ್ಯನವರ ಹೊಸ ಮನೆಗೂ ತಟ್ಟಿದ್ದು.

ಡಿಸೆಂಬರ್‌ನಲ್ಲಿ ಗೃಹಪ್ರವೇಶಕ್ಕೆ ಸಿದ್ದತೆ ನಡೆದಿದ್ದು, ಈ ಸಂಬಂಧ ಎರಡು ತಿಂಗಳ ಹಿಂದೆಯೇ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದ್ರೆ. ಓಸಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಈ ಬಗ್ಗೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ಮೈಸೂರಿನ ಕುವೆಂಪುನಗರದ ಸಿಎಂ ಸಿದ್ದರಾಮಯ್ಯ ಹೊಸ ಮನೆ ಬಳಿಯಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ಇದನ್ನೂ ಓದಿ:  ಸಿದ್ದರಾಮಯ್ಯ ಕುಟುಂಬಕ್ಕೆ ಅನ್ನ, ಆಶ್ರಯ ಕೊಟ್ಟ ಮರಿಸ್ವಾಮಿ ಯಾರು ಗೊತ್ತೇ? ಸಿಎಂ ಅಂದ್ರೆ ಈ ಕುಚುಕು ಗೆಳೆಯನಿಗೆ ಪ್ರಾಣವಂತೆ!

Published on: Nov 21, 2025 08:29 PM