SM Krishna No More: ಒಬ್ಬ ವ್ಯಕ್ತಿಯಾಗಿಯೂ ಎಸ್​ಎಂ ಕೃಷ್ಣ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಡಿಕೆ ಸುರೇಶ್

|

Updated on: Dec 11, 2024 | 11:48 AM

ಸಹೋದರ ಡಿ ಕೆ ಶಿವಕುಮಾರ್ ಮತ್ತು ತಾನು ರಾಜಕೀಯ ಬದುಕಿನ ಆರಂಭದಿಂದಲೂ ಕೃಷ್ಣ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೆವು, ಬೆಳವಣಿಗೆಯ ಎಲ್ಲ ಹಂತಗಳಲ್ಲಿ ಅವರಿಂದ ಮಾರ್ಗದರ್ಶನ ಪಡೆದಿದ್ದೇವೆ, ಸಂಬಂಧ ಬೆಳೆಸುವಾಗಲೂ ಅವರು ತಮ್ಮಿಬ್ಬರನ್ನು ಮನೆಗೆ ಕರೆದು ವಿಷಯವನ್ನು ಪ್ರಸ್ತಾಪ ಮಾಡಿದ್ದರು ಎಂದು ಸುರೇಶ್ ಹೇಳಿದರು.

ರಾಮನಗರ: ನಿನ್ನೆ ಸ್ವರ್ಗಸ್ಥರಾದ ಎಸ್ ಎಂ ಕೃಷ್ಣ ಅವರು ಸರಳ ಜೀವಿಯಾಗಿದ್ದರು ಮತ್ತು ಅವರ ರಾಜಕೀಯ ಬದುಕು ಇಂದಿನ ಎಲ್ಲ ರಾಜಕಾರಣಿಗಳಿಗೆ ಆದರ್ಶವಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು. ಬಿಡದಿಯಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಸುರೇಶ್, ಕೃಷ್ಣ ಅವರು ಒಬ್ಬ ರಾಜಕಾರಣಿಯಾಗಿ ಮಾತ್ರವಲ್ಲ ವ್ಯಕ್ತಿಯಾಗಿಯೂ ಎಲ್ಲರಿಗೆ ಮಾದರಿಯಾಗಿದ್ದಾರೆ, ಬದುಕಿನಲ್ಲಿ ಸೋಲು-ಗೆಲುವು, ನೋವು-ನಲಿವು ಅನುಭವಿಸಿದ ಅವರು ಬೆಂಗಳೂರನ್ನು ಐಟಿ ಬಿಟಿ ಹಬ್ ಮಾಡುವ ಮೂಲಕ ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೆ ಕಾರಣರಾದರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  SM Krishna No More: ತಮ್ಮ ರಾಜಕೀಯ ಗುರು ಎಸ್​​ಎಂ ಕೃಷ್ಣರ ಪಾರ್ಥಿವ ಶರೀರ ಬಿಟ್ಟು ಕದಲಲೊಲ್ಲದ ಶಿವಕುಮಾರ್