Sign In

By signing in or creating an account, you agree with Associated Broadcasting Company's Terms & Conditions and Privacy Policy.

SM Krishna No More: ತಮ್ಮ ರಾಜಕೀಯ ಗುರು ಎಸ್​​ಎಂ ಕೃಷ್ಣರ ಪಾರ್ಥಿವ ಶರೀರ ಬಿಟ್ಟು ಕದಲಲೊಲ್ಲದ ಶಿವಕುಮಾರ್

SM Krishna No More: ತಮ್ಮ ರಾಜಕೀಯ ಗುರು ಎಸ್​​ಎಂ ಕೃಷ್ಣರ ಪಾರ್ಥಿವ ಶರೀರ ಬಿಟ್ಟು ಕದಲಲೊಲ್ಲದ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Dec 11, 2024 | 11:28 AM

SM Krishna No More: ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಎಸ್ ಎಂ ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗಡೆ ಅವರನ್ನು ಮದುವೆಯಾಗಿದ್ದಾರೆ. ಕೃಷ್ಣ ಸಾವಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಿವಕುಮಾರ್ ತನ್ನ ಮತ್ತು ಕೃಷ್ಣ ಅವರ ಸಂಬಂಧ ತಂದೆ-ಮಗನ ಹಾಗಿತ್ತು ಎಂದು ಹೇಳಿದ್ದರು.

ಬೆಂಗಳೂರು: ರಾಜಕೀಯ ಬಾಂಧವ್ಯಗಳೇ ಹಾಗೆ, ನಮ್ಮ ಗ್ರಹಿಕೆಗೆ ಸಿಗಲಾರದಂಥವು. ಪ್ರತಿಯೊಬ್ಬ ರಾಜಕಾರಣಿಗೆ ಒಬ್ಬ ಆದರ್ಶ ಇರುತ್ತಾರೆ, ಅವರನ್ನೇ ರೋಲ್ ಮಾಡೆಲ್ ಮಾಡಿಕೊಂಡು ತಮ್ಮ ರಾಜಕೀಯ ಬದುಕನ್ನು ರೂಪಿಸಿಕೊಂಡಿರುತ್ತಾರೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಎಸ್ ಎಂ ಕೃಷ್ಣ ರಾಜಕೀಯ ಗುರುವಾಗಿದ್ದರು. ನಿನ್ನೆಯಿಂದ ಶಿವಕುಮಾರ್ ಅವರು ಕೃಷ್ಣ ಕುಟುಂಬದ ಜೊತೆಯಲ್ಲೇ ಇದ್ದಾರೆ. ಇವತ್ತು ಅಂತಿಮ ಯಾತ್ರೆ ನಡೆಯುವಾಗಲೂ ಅವರು ಕೃಷ್ಣ ಅವರ ಪಾರ್ಥೀವ ಶರೀರ ಸುತ್ತ ಓಡಾಡುವುದನ್ನು ಮತ್ತು ಅದೇ ವಾಹನದಲ್ಲಿ ಕುಳಿತು ಸೋಮನಹಳ್ಳಿ ಕಡೆ ತೆರಳುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  SM Krishna No More: ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಎಸ್​ಎಂ ಕೃಷ್ಣ ಅವರು ನೀಡಿದ ಕೊಡುಗೆ ಅಪರಿಮಿತವಾದದ್ದು: ಹೆಚ್ ಡಿ ಕುಮಾರಸ್ವಾಮಿ

Published on: Dec 11, 2024 11:06 AM