SM Krishna No More: ಮಾಜಿ ಮುಖ್ಯಮಂತ್ರಿಯ ಅಂತ್ಯ ಸಂಸ್ಕಾರಕ್ಕೆ ಬಳಕೆಯಾಗಲಿದೆ ಒಂದು ಟನ್ ಗಂಧದ ಕಟ್ಟಿಗೆ
ಹಿಂದೆ ವರನಟ ಡಾ ರಾಜ್ ಕುಮಾರ್ ಮತ್ತು ಚಿತ್ರನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ಸಂಸ್ಕಾರಕ್ಕೂ ಗಂಧದ ಮರ ತುಂಡುಗಳನ್ನು ಬಳಸಲಾಗಿತ್ತು ಎಂದು ಅರಣ್ಯಾಧಿಕಾರಿ ಮಹಾದೇವ ಹೇಳುತ್ತಾರೆ. ಹಿರಿಯ ಮುತ್ಸದ್ದಿಯಾಗಿದ್ದ ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರ ಹುಟ್ಟೂರು ಸೋಮನಹಳ್ಳಿಯಲ್ಲಿ ಇಂದು ನಡೆಯಲಿದೆ.
ಮಂಡ್ಯ: ನಮ್ಮ ಮೈಸೂರು ವರದಿಗಾರ ಹೇಳುವ ಪ್ರಕಾರ ಎಸ್ ಎಂ ಕೃಷ್ಣ ಅವರು ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿ. ಅವರ ಅಂತ್ಯ ಸಂಸ್ಕಾರಕ್ಕಾಗಿ 1000 ಕೇಜಿಯಷ್ಟು ಗಂಧದ ಮರ ತುಂಡುಗಳನ್ನು ಬಳಸಲಾಗುತ್ತಿದೆ. ಮೈಸೂರು ವಲಯದ ಎಸಿಎಫ್ ಮಹಾದೇವ ಹೇಳುವ ಹಾಗೆ ಗಂಧದ ಮರ ತುಂಡುಗಳನ್ನು ಮೈಸೂರಿನ ಗಂಧದ ಕೋಠಿಯಿಂದ ತರಿಸಲಾಗಿದೆ. ಬೇರೆ ಬೇರೆ ಸೈಜು ಮತ್ತು ಆಕಾರದ ಮರದ ತುಂಡುಗಳನ್ನು ಮಿನಿಟ್ರಕ್ನಲ್ಲಿ ತರಿಸಲಾಗಿದೆ ಮತ್ತು ಅಂತ್ಯ ಸಂಸ್ಕಾರಕ್ಕೆ ಗಂಧದ ಮರ ತುಂಡುಗಳೊಂದಿಗೆ ಬೇರೆ ಮರಗಳ ತುಂಡುಗಳನ್ನೂ ಬಳಸುವ ಸಾಧ್ಯತೆ ಇದೆಯೆಂದು ಅರಣ್ಯಾಧಿಕಾರಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SM Krishna No More: ಒಬ್ಬ ವ್ಯಕ್ತಿಯಾಗಿಯೂ ಎಸ್ಎಂ ಕೃಷ್ಣ ಪ್ರತಿಯೊಬ್ಬರಿಗೆ ಆದರ್ಶಪ್ರಾಯ: ಡಿಕೆ ಸುರೇಶ್
Latest Videos