ಎದೆ ಝಲ್ ಎನಿಸುವ ದೃಶ್ಯ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್ನಿಂದ ಬಾಲಕನ ಜೀವ ಹೋಗಿದೆ. ಹೌದು ರಸ್ತೆ ಬದಿ ಗೆಳೆಯರ ಜೊತೆ ಮೂತ್ರ ವಿಸರ್ಜನೆಗೆ ಬಂದಿದ್ದ ಬಾಲಕನ ಮೇಲೆ ಬಸ್ ಹರಿದಿದೆ. ಮುಂದೇನಾಯ್ತು ವಿಡಿಯೋ ನೋಡಿ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಎದೆ ಝಲ್ ಎನಿಸುವ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ವಾಯುವ್ಯ ಕರ್ನಾಟಕ ಸಾರಿಗೆ (NWKRTC) ಬಸ್ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುನೀಲ್ ಬಂಡರಗರ್ (10 ವರ್ಷ) ಮೃತ ದುರ್ದೈವಿ. ಸುನೀಲ್ ಬಂಡರಗರ್ ಅಥಣಿ ಪಟ್ಟಣದಲ್ಲಿನ ಗಲಗಲಿ ಆಸ್ಪತ್ರೆ ಬಳಿಯ ಟ್ಯೂಷನ್ಗೆ ಬಂದಿದ್ದನು.
ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆಯಂದು ಸುನೀಲ್ ಬಂಡರಗರ್ ಗೆಳೆಯರ ಜೊತೆ ರಸ್ತೆ ಬದಿ ನಿಂತಿದ್ದನು. ಈ ವೇಳೆ ಅಥಣಿಯಿಂದ ಕಾರವಾರಕ್ಕೆ ಹೊರಟಿದ್ದ ಸರ್ಕಾರಿ ಬಸ್ ಹುಡುಗರ ಮೇಲೆ ಬರುತ್ತಿತ್ತು. ಇದನ್ನು ಗಮನಿಸಿದ ಸುನೀಲ್ ಬಂಡರಗರ್ ಗೆಳೆಯರು ಹಿಂದಕ್ಕೆ ಸರಿದಿದ್ದಾರೆ. ಆದರೆ, ಸುನೀಲ್ ಬಂಡರಗರ್ ಹಿಂದೆ ಸರೆಯುವಷ್ಟರಲ್ಲಿ ಬಸ್ ಹರಿದಿದೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 08, 2024 02:16 PM