ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾಲಯದ ಸಿಬ್ಬಂದಿ

ಗಣೇಶ ಹಬ್ಬದ ಸಂಭ್ರಮದಲ್ಲೂ ಕಸದಿಂದ ರಸ ನಿಯಮ ಅನುಸರಿಸಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಪೈಪ್​ನಲ್ಲಿ ಗಣೇಶನ ಅನಾವರಣ ಮಾಡಿದ್ದಾರೆ. ಹೌದು, ನಿಂತ ಭಂಗಿಯಲ್ಲಿರುವ ಇಡೀ ಗಣೇಶನನ್ನ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರುಪಯುಕ್ತ ಪೈಪ್​ಗಳಿಂದ ನಿರ್ಮಾಣ ಮಾಡಿದ್ದಾರೆ.

ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾಲಯದ ಸಿಬ್ಬಂದಿ
|

Updated on: Sep 08, 2024 | 5:07 PM

ಬಾಗಲಕೋಟೆ, ಸೆ.08: ಗಣೇಶ ಹಬ್ಬದ ಸಂಭ್ರಮದಲ್ಲೂ ಕಸದಿಂದ ರಸ ನಿಯಮ ಅನುಸರಿಸಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಪೈಪ್​ನಲ್ಲಿ ಗಣೇಶನ ಅನಾವರಣ ಮಾಡಿದ್ದಾರೆ. ಹೌದು, ನಿಂತ ಭಂಗಿಯಲ್ಲಿರುವ ಇಡೀ ಗಣೇಶನನ್ನ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರುಪಯುಕ್ತ ಪೈಪ್​ಗಳಿಂದ ನಿರ್ಮಾಣ ಮಾಡಿದ್ದಾರೆ.  20 ವಿದ್ಯಾರ್ಥಿಗಳಿಂದ ಒಂದು ವಾರಗಳ ಕಾಲ ನಿರಂತರ ಶ್ರಮದಿಂದ ಈ ಆಕರ್ಷಕ ಗಣಪ ಅರಳಿ ನಿಂತಿದೆ. ಇನ್ನು ಇವರು ಸತತ 30 ವರ್ಷದಿಂದ ನಿರುಪಯುಕ್ತ ವಸ್ತುಗಳಲ್ಲೇ ಗಣೇಶ ನಿರ್ಮಾಣ ಮಾಡಿ ಪ್ರತಿಷ್ಟಾಪನೆ ಮಾಡುತ್ತಾ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us