ಎದೆ ಝಲ್​ ಎನಿಸುವ ದೃಶ್ಯ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್

ಎದೆ ಝಲ್​ ಎನಿಸುವ ದೃಶ್ಯ: ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಸರ್ಕಾರಿ ಬಸ್

Sahadev Mane
| Updated By: ವಿವೇಕ ಬಿರಾದಾರ

Updated on:Sep 08, 2024 | 2:38 PM

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಬಸ್​ನಿಂದ ಬಾಲಕನ ಜೀವ ಹೋಗಿದೆ. ಹೌದು ರಸ್ತೆ ಬದಿ ಗೆಳೆಯರ ಜೊತೆ ಮೂತ್ರ ವಿಸರ್ಜನೆಗೆ ಬಂದಿದ್ದ ಬಾಲಕನ ಮೇಲೆ ಬಸ್​ ಹರಿದಿದೆ. ಮುಂದೇನಾಯ್ತು ವಿಡಿಯೋ ನೋಡಿ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಎದೆ ಝಲ್​ ಎನಿಸುವ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ವಾಯುವ್ಯ ಕರ್ನಾಟಕ ಸಾರಿಗೆ (NWKRTC) ಬಸ್​​ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸುನೀಲ್ ಬಂಡರಗರ್ (10 ವರ್ಷ) ಮೃತ ದುರ್ದೈವಿ. ಸುನೀಲ್​ ಬಂಡರಗರ್​​ ಅಥಣಿ ಪಟ್ಟಣದಲ್ಲಿನ ಗಲಗಲಿ ಆಸ್ಪತ್ರೆ ಬಳಿಯ ಟ್ಯೂಷನ್​ಗೆ ಬಂದಿದ್ದನು.

ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆಯಂದು ಸುನೀಲ್​ ಬಂಡರಗರ್ ಗೆಳೆಯರ ಜೊತೆ ರಸ್ತೆ ಬದಿ ನಿಂತಿದ್ದನು. ಈ ವೇಳೆ ಅಥಣಿಯಿಂದ ಕಾರವಾರಕ್ಕೆ ಹೊರಟಿದ್ದ ಸರ್ಕಾರಿ ಬಸ್ ಹುಡುಗರ ಮೇಲೆ ಬರುತ್ತಿತ್ತು. ಇದನ್ನು ಗಮನಿಸಿದ ಸುನೀಲ್​ ಬಂಡರಗರ್ ಗೆಳೆಯರು ಹಿಂದಕ್ಕೆ ಸರಿದಿದ್ದಾರೆ. ಆದರೆ, ಸುನೀಲ್​ ಬಂಡರಗರ್ ಹಿಂದೆ ಸರೆಯುವಷ್ಟರಲ್ಲಿ ಬಸ್​ ಹರಿದಿದೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Sep 08, 2024 02:16 PM