ಮೀನುಗಾರಿಕೆ ಉದ್ಯಮ ಏಳಿಗೆಗಾಗಿ ಸಮುದ್ರದಲ್ಲಿ ಬೋಟ್ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಕರ್ನಾಟಕ ಮೀನುಗಾರಿಕೆ ಮತ್ತು ಬಂದರು ಒಳನಾಡು ಸಚಿವ ಮಂಕಾಳ ವೈದ್ಯ ಅವರು ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಣೆ ಮಾಡಿದರು. ಖುದ್ದು ಅವರೇ ಸಮುದ್ರದಲ್ಲಿ ಬೋಟ್ ಚಲಾಯಿಸಿಕೊಂಡು ಹೋಗಿ ಬಾಗಿನ ಅರ್ಪಿಸಿರುವುದು ವಿಶೇಷ.
ಕಾರವಾರ, (ಸೆಪ್ಟೆಂಬರ್ 08): ಸಚಿವ ಮಂಕಾಳ ವೈದ್ಯ ತಾವೇ ಖುದ್ದಾಗಿ ಬೋಟ್ ಚಲಾಯಿಸಿಕೊಂಡು ಹೋಗಿ ಬಾಗಿನ ಅರ್ಪಿಸಿದ್ದಾರೆ. ರಾಜ್ಯದ ಕರಾವಳಿಯಲ್ಲಿ ತೀವ್ರ ಮತ್ಸ್ಯ ಕ್ಷಾಮ ಉಂಟಾದ ಹಿನ್ನಲೆಯಲ್ಲಿ ಮಂಕಾಳ ವೈದ್ಯ ಇಂದು (ಸೆಪ್ಟೆಂಬರ್ 08) ಬರಪುರ ಮೀನಿನ ಶಿಕಾರಿ ಆಗಲಿ, ನೆಲಕಚ್ಚಿರುವ ಮೀನುಗಾರಿಕಾ ಉದ್ಯಮ ಏಳಿಗೆ ಕಾಣಲಿ ಎಂದು ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಣೆ ಮಾಡಿದರು. ವಿಶೇಷ ಅಂದ್ರೆ, ಸಚಿವ ಮಂಕಾಳ ವೈದ್ಯ ಅವರು ಅರಬ್ಬಿ ಸಮುದ್ರದಲ್ಲಿ ಬೋಟ್ ಚಲಾಯಿಸಿದರು.