ಒಡಿಷಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ರನ್ನು ಭೇಟಿಯಾದರು!

ಉನ್ನತಮಟ್ಟದ ನಿಯೋಗದೊಂದಿಗೆ ರೋಮ್ ಮತ್ತು ದುಬೈ ಪ್ರವಾಸಕ್ಕೆ ತೆರಳಿರುವ ಮುಖ್ಯಮಂತ್ರಿಗಳು ಗುರುವಾರದಂದು ರೋಮ್ ನಲ್ಲಿರುವ ವರ್ಲ್ಡ್ ಫುಡ್ ಪ್ರೋಗ್ರಾಮ್ (ಡಬ್ಲ್ಯೂ ಎಫ್ ಪಿ) ಕಚೇರಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಕುರಿತು ಒಡಿಷಾದ ‘ಪರಿವರ್ತನಾ ಯಾನ’ದ ಮಾಹಿತಿ ಮತ್ತು ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.

TV9kannada Web Team

| Edited By: Arun Belly

Jun 23, 2022 | 2:20 PM

ಒಡಿಷಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಅವರು ಬುಧವಾರದಂದು ವ್ಯಾಟಿಕನ್ ಸಿಟಿಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis) ಅವರನ್ನು ಭೇಟಿಯಾದರು. ಉನ್ನತಮಟ್ಟದ ನಿಯೋಗದೊಂದಿಗೆ (delegation) ರೋಮ್ ಮತ್ತು ದುಬೈ ಪ್ರವಾಸಕ್ಕೆ ತೆರಳಿರುವ ಮುಖ್ಯಮಂತ್ರಿಗಳು ಗುರುವಾರದಂದು ರೋಮ್ ನಲ್ಲಿರುವ ವರ್ಲ್ಡ್ ಫುಡ್ ಪ್ರೋಗ್ರಾಮ್ (ಡಬ್ಲ್ಯೂ ಎಫ್ ಪಿ) ಕಚೇರಿಗೆ ಭೇಟಿ ನೀಡಿ ಆಹಾರ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಕುರಿತು ಒಡಿಷಾದ ‘ಪರಿವರ್ತನಾ ಯಾನ’ದ ಮಾಹಿತಿ ಮತ್ತು ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ತಮ್ಮ ರಾಜ್ಯದಿಂದ ತೆಗೆದುಕೊಂಡು ಹೋಗಿರುವ ಉಡುಗೊರೆಯೊಂದನ್ನು ಪಟ್ನಾಯಕ್, ಪೋಪ್ ಅವರಿಗೆ ನೀಡಿದರು.

ಅವರನ್ನು ಭೇಟಿಯಾದ ಬಳಿಕ ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Click on your DTH Provider to Add TV9 Kannada