AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Odisha Train Accident: ಜಖಂಗೊಂಡಿದ್ದ ಎಲ್ಲಾ ರೈಲ್ವೇ ಬೋಗಿ ತೆರವು

Odisha Train Accident: ಜಖಂಗೊಂಡಿದ್ದ ಎಲ್ಲಾ ರೈಲ್ವೇ ಬೋಗಿ ತೆರವು

TV9 Web
| Edited By: |

Updated on: Jun 04, 2023 | 9:38 AM

Share

Tv9 Ground Report: ಪಲ್ಟಿ ಆಗಿದ್ದ ಎಲ್ಲಾ ರೈಲ್ವೆ ಬೋಗಿಗಳನ್ನು ತೆರವು ಮಾಡಲಾಗಿದೆ. ಟ್ರ್ಯಾಕ್ ಚೆಕ್ ಮತ್ತು ಟ್ರ್ಯಾಕ್ ಲೈನ್ ಕ್ಲಿಯರ್ ‌ಮಾಡಲಾಗ್ತಿದೆ. ರೈಲ್ವೆ ಇಲಾಖೆ ಕಾರ್ಮಿಕರು ರಾತ್ರಿಯಿಡೀ ರಕ್ಷಣಾ ಕಾರ್ಯ ನಡೆಸಿದ್ದಾರೆ. ಕಟ್ ಆಗಿದ್ದ ಎಲ್ಲಾ ಹಳಿಗಳನ್ನು ರೆಡಿ ಮಾಡಲಾಗ್ತಿದೆ.

ಒಡಿಶಾದ ಬಹನಾಗದಲ್ಲಿ 3 ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಾವಿನ ಸಂಖ್ಯೆ ಏರುತ್ತಿದೆ. ಸಾವಿರಾರು ಜನ ನರಳಾಡ್ತಿದ್ದಾರೆ. ಸದ್ಯ ಪಲ್ಟಿ ಆಗಿದ್ದ ಎಲ್ಲಾ ರೈಲ್ವೆ ಬೋಗಿಗಳನ್ನು ತೆರವು ಮಾಡಲಾಗಿದೆ. ಟ್ರ್ಯಾಕ್ ಚೆಕ್ ಮತ್ತು ಟ್ರ್ಯಾಕ್ ಲೈನ್ ಕ್ಲಿಯರ್ ‌ಮಾಡಲಾಗ್ತಿದೆ. ರೈಲ್ವೆ ಇಲಾಖೆ ಕಾರ್ಮಿಕರು ರಾತ್ರಿಯಿಡೀ ರಕ್ಷಣಾ ಕಾರ್ಯ ನಡೆಸಿದ್ದಾರೆ. ಕಟ್ ಆಗಿದ್ದ ಎಲ್ಲಾ ಹಳಿಗಳನ್ನು ರೆಡಿ ಮಾಡಲಾಗ್ತಿದೆ. ಮತ್ತೆ ಹಳಿ ಮೇಲೆ ರೈಲುಗಳು ಸಂಚಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ಲೂಪ್ ಲೈನ್ ಮೇಲಿದ್ದ ಗೂಡ್ಸ್ ರೈಲಿನ ಬೋಗಿಗಳನ್ನು ಕ್ರೈನ್, ಜೆಸಿಬಿ ಮೂಲಕ ತೆರವು ‌ಮಾಡಲಾಗ್ತಿದೆ. ರಾತ್ರಿಯಿಡೀ ನಿರಂತರವಾಗಿ ಬೋಗಿಗಳನ್ನು ತೆರವು ಕಾರ್ಯಚರಣೆ ಮಾಡಲಾಗ್ತಿದೆ. ಸ್ಥಳದಲ್ಲಿ ಎನ್​ಡಿಆರ್​ಎಫ್, ಎಫ್​ಡಿಆರ್​ಎಫ್,ರಕ್ಷಣಾ ಇಲಾಖೆಯ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮೊಕಂ ಹೂಡಿದ್ದಾರೆ.