ಯಲ್ಲಮ್ಮನ ಗುಡ್ಡದ ಅಂಗಡಿಗಳ ಮೇಲೆ ಅಧಿಕಾರಿಗಳಿಂದ ರೇಡ್​​: ಕುಂಕುಮ, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ

Edited By:

Updated on: Sep 21, 2026 | 3:02 PM

ಯಲ್ಲಮ್ಮನ ಗುಡ್ಡದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಕುಂಕುಮ, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧಿ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ಕಳಪೆ ಗುಣಮಟ್ಟದ ಧಾರ್ಮಿಕ ವಸ್ತುಗಳ ಮಾರಾಟವೂ ಕಂಡುಬಂದಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಎಲ್ಲಮ್ಮ ದೇಗುಲ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ನೇತೃತ್ವದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಳಗಾವಿ, ಸೆಪ್ಟೆಂಬರ್​​ 21: ಸವದತ್ತಿಯಲ್ಲಿರುವ ಐತಿಹಾಸಿಕ ಯಲ್ಲಮ್ಮನ ಗುಡ್ಡದಲ್ಲಿ ವ್ಯಾಪಾರಸ್ಥರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕುಂಕುಮ ಭಂಡಾರ, ಕಿರಾಣಿ ಅಂಗಡಿಗಳ ಮೇಲೆ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅಂಗಡಿಗಳಲ್ಲಿ ಔಷಧ ಮತ್ತು ಮಾತ್ರೆ ಪತ್ತೆಯಾಗಿದೆ. ಅಂಗಡಿಗಳಲ್ಲಿ ಅಸ್ವಚ್ಛತೆ ಹಾಗೂ ಕಳಪೆ ಆಹಾರ ಸಾಮಗ್ರಿ ಕಂಡು ಅಧಿಕಾರಿಗಳು ಗರಂ ಆಗಿದ್ದು, ನಿಮ್ಮ ಮನೆಯಲ್ಲೂ ಇದೇ ತರಕಾರಿ ತಿಂತೀರಾ ಎಂದು ತರಾಟೆಗೆ ಪಡೆದಿದ್ದಾರೆ. ತಂಪು ಪಾನೀಯ, ಆಹಾರ ಪ್ಯಾಕೆಟ್‌ ಮೇಲೆ ಎಕ್ಸ್‌ಪೈರಿ ಡೇಟ್‌ ಇಲ್ಲದಿರೋದು ಕಂಡುಬಂದಿರುವ ಜೊತೆಗೆ ಕೆಲವೊಂದು ಅಂಗಡಿ ಪರವಾನಗಿ ನವೀಕರಸದೆ ವ್ಯಾಪಾರ ವಹಿವಾಟು ಮಾಡುತ್ತಿರೋದು ಈ ವೇಳೆ ಗೊತ್ತಾಗಿದೆ. ನಿಯಮ ಮೀರಿದ ಅಂಗಡಿಗಳ ವಿದ್ಯುತ್‌, ನೀರಿನ ಸಂಪರ್ಕ ಕಡಿತಕ್ಕೆ ಸೂಚನೆ ನೀಡಲಾಗಿದ್ದು, ಭಕ್ತರಿಗೆ ಯಾವುದೇ ವರ್ತಕರು ಮೋಸ ಮಾಡಬಾರದೆಂದು ಪ್ರಭಾವತಿ ವಾರ್ನಿಂಗ್ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More