ಪೆಟ್ರೋಲ್​ಗೆ ಹಣ ಸುರಿದು ಕಂಗಾಲಾಗುತ್ತಿರುವವರಿಗೆ ಸಿಹಿ ಸುದ್ದಿ; ಓಲಾ ಇ-ಸ್ಕೂಟರ್ ಆಗಸ್ಟ್ 15 ರಂದು ಲಾಂಚ್ ಆಗುತ್ತಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2021 | 7:33 PM

ಇದುವರೆಗೆ ಕೇವಲ ಕ್ಯಾಬ್ ಸೇವೆಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿದ್ದ ಅಗರ್ವಾಲ್ ಅವರು ದ್ವಿಚಕ್ರ ವಾಹನಗಳ ವಲಯಕ್ಕೂ ಕಾಲಿಟ್ಟಿದ್ದಾರೆ. ಆಗಸ್ಟ್ 3 ರ ಟ್ವೀಟ್ ನಲ್ಲಿ ಅವರು ತಮ್ಮ ಓಲಾ ಇ-ಸ್ಕೂಟರ್ ಬುಕ್ ಮಾಡಿದವರಿಗೆ ಧನ್ಯವಾದಗಳನ್ನು ಹೇಳುತ್ತಾ ಅದು ಆಗಸ್ಟ್ 15 ರಂದು ಲಾಂಚ್ ಆಗಲಿದೆ ಎಂದು ಹೇಳಿದ್ದರು.

ನಗರಪ್ರದೇಶಗಳಲ್ಲಿ ಕ್ಯಾಬ್ ಸೇವೆಯನ್ನು ಆರಂಭಿಸಿ ಜನರ ಬದುಕನ್ನು ನಿರಾಳಗೊಳಿಸಿರುವ ಮತ್ತು ಕರೆದಲ್ಲಿಗೆ ಬಾರದ, ವಿನಾಕಾರಣ ಮೀಟರ್ ಮೇಲೆ ಅಷ್ಟಿಷ್ಟು ಕೊಡಿ ಅಂತ ಗ್ರಾಹಕರನ್ನು ಸತಾಯಿಸುವ ಆಟೋ ಡ್ರೈವರ್ಗಳ ಕಿರುಕುಳದಿಂದ ಮುಕ್ತಿ ನೀಡಿರುವ ಓಲಾ ಕ್ಯಾಬ್ ಸೇವೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾವಿಷ್ ಆಗರ್ವಾಲ್ ಅವರು ಸತತವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದ ಕಂಗಾಲಾಗುತ್ತಿರುವ ಜನರಿಗೆ ಒಂದು ಸಂತೋಷದ ಸುದ್ದಿ ನೀಡಲು ಅಣಿಯಾಗಿದ್ದಾರೆ.

ಇದುವರೆಗೆ ಕೇವಲ ಕ್ಯಾಬ್ ಸೇವೆಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಂಡಿದ್ದ ಅಗರ್ವಾಲ್ ಅವರು ದ್ವಿಚಕ್ರ ವಾಹನಗಳ ವಲಯಕ್ಕೂ ಕಾಲಿಟ್ಟಿದ್ದಾರೆ. ಆಗಸ್ಟ್ 3 ರ ಟ್ವೀಟ್ ನಲ್ಲಿ ಅವರು ತಮ್ಮ ಓಲಾ ಇ-ಸ್ಕೂಟರ್ ಬುಕ್ ಮಾಡಿದವರಿಗೆ ಧನ್ಯವಾದಗಳನ್ನು ಹೇಳುತ್ತಾ ಅದು ಆಗಸ್ಟ್ 15 ರಂದು ಲಾಂಚ್ ಆಗಲಿದೆ ಎಂದು ಹೇಳಿದ್ದರು.

ಹಾಗೆಯೇ, ಇಂದು (ಶುಕ್ರವಾರ) ಮಾಡಿರುವ ಟ್ವಿಟ್ ನಲ್ಲಿ ಭಾವಿಷ್ ಅಗರ್ವಾಲ್ ಅವರು ತಮ್ಮ ಮೊದಲ ಇವಿ ಸ್ಕೂಟರ್ಗೆ ಭಾರತದ 1000 ನಗರಗಳಿಂದ ಬುಕಿಂಗ್ಗಳು ಬಂದಿವೆ ಎಂದು ಹೇಳಿದ್ದಾರೆ. ಇವಿ ಸ್ಕೂಟರ್ ವಲಯದಲ್ಲಿ ತಮ್ಮ ಸ್ಕೂಟರ್ ಕ್ರಾಂತಿ ಉಂಟು ಮಾಡಲಿದೆ ಎನ್ನುವ ಅವರು ಲಾಂಚ್ ಆದ ಮೊದಲ ದಿನದಿಂದಲೇ ದೇಶದೆಲ್ಲೆಡೆ ಡೆಲಿವರಿ ಮತ್ತು ಸರ್ವೀಸ್ ಆರಂಭವಾಗಲಿದೆ ಅಂತ ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಆಗಸ್ಟ್ 15 ರಂದು ಲಭ್ಯವಾಗಲಿದೆ ಮತ್ತು ಎಲ್ಲರೂ ಜೊತೆಯಾಗಿ ಕ್ರಾಂತಿಯನ್ನು ಸೃಷ್ಟಿಸೋಣ ಎಂದು ಭಾವಿಷ್ ಹೇಳಿದ್ದಾರೆ.

ಇದನ್ನೂ ಓದಿ: Viral Video: ಶಾಸಕನ ಕಾಲಿಗೆ ಶೂ ಹಾಕಿ, ಲೇಸ್ ಕಟ್ಟಿದ ಸರ್ಕಾರಿ ನೌಕರರು; ವೈರಲ್ ವಿಡಿಯೋಗೆ ಭಾರೀ ಟೀಕೆ