ಎರಡು ಎತ್ತು, ಒಂದು ಎಮ್ಮೆ ತಗೊಳ್ರಿ; ಲಸಿಕೆ ಮಾತ್ರ ಕೊಡ ಬ್ಯಾಡ್ರಿ ಎಂದ ವೃದ್ಧ

ಎರಡು ಎತ್ತು, ಒಂದು ಎಮ್ಮೆ ತಗೊಳ್ರಿ; ಲಸಿಕೆ ಮಾತ್ರ ಕೊಡ ಬ್ಯಾಡ್ರಿ ಎಂದ ವೃದ್ಧ

TV9 Web
| Updated By: sandhya thejappa

Updated on: Jan 24, 2022 | 12:16 PM

ನನಗೆ ಸಿಗಬೇಕಾದ ಸೌಲಭ್ಯ ಕಡಿತವಾದರೂ ಪರವಾಗಿಲ್ಲ, ನಾನು ಮಾತ್ರ ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ವೃದ್ಧೆ ಹನುಮವ್ವ ತಳವಾರ ಹೇಳಿದರು. ಇನ್ನೊಂದು ಕಡೆ ವೃದ್ಧ ಹನುಮಪ್ಪ ಹನುಮಸಾಗರ ಎಂಬುವವರು ಲಸಿಕೆ ಪಡೆಯಲು ನಿರಾಕರಿಸಿದ್ದಾರೆ.

ಕೊರೊನಾ (Coronavirus) ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರವೆಂದರೆ ಅದು ಲಸಿಕೆ (Vaccine) ಮಾತ್ರ. ಹೀಗಿದ್ದೂ, ರಾಜ್ಯದ ಹಲವೆಡೆ ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುತ್ತಿದ್ದರೂ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿಯಲ್ಲಿ ಇಂದು (ಜ.24) ಯುವಕ ಮಂಜುನಾಥ್ ಎಂಬುವವನು ಲಸಿಕೆ ಬೇಡ ಅಂತ ಮನೆ ಏರಿದ್ದ. ಇನ್ನು ಕೊಪ್ಪಳದಲ್ಲಿ ಲಸಿಕೆ ನೀಡಲು ಬಂದ ಸಿಬ್ಬಂದಿಗೆ ವೃದ್ಧೆ ಅವಾಜ್ ಹಾಕಿದ್ದಾರೆ. ನೀವು ಲಸಿಕೆ ಹಾಕುವುದಕ್ಕೆ ಬಂದರೆ ನಾನು ಸಾಯುತ್ತೇನೆ. ನಿಮ್ಮ ಹೆಸರು ಬರೆದಿಟ್ಟು ಸಾಯುತ್ತೇನೆ ಅಂತ ಅಜ್ಜಿ ಬೆದರಿಕೆ ಹಾಕಿದ್ದಾರೆ.

ನನಗೆ ಸಿಗಬೇಕಾದ ಸೌಲಭ್ಯ ಕಡಿತವಾದರೂ ಪರವಾಗಿಲ್ಲ, ನಾನು ಮಾತ್ರ ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ವೃದ್ಧೆ ಹನುಮವ್ವ ತಳವಾರ ಹೇಳಿದರು. ಇನ್ನೊಂದು ಕಡೆ ವೃದ್ಧ ಹನುಮಪ್ಪ ಹನುಮಸಾಗರ ಎಂಬುವವರು ಲಸಿಕೆ ಪಡೆಯಲು ನಿರಾಕರಿಸಿದ್ದಾರೆ. 2 ಎತ್ತು, ಎಮ್ಮೆ, ಕಾಳು ಎಲ್ಲಾ ತೆಗೆದುಕೊಳ್ಳಿ ನನಗೆ ಕೊವಿಡ್ ಲಸಿಕೆ ಮಾತ್ರ ಬೇಡ ಅಂತ ಹಠ ಮಾಡಿದ್ದಾರೆ.

ಇದನ್ನೂ ಓದಿ

ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? – ರೇಣುಕಾಚಾರ್ಯ ಗರಂ

ಭಾರತದಲ್ಲಿ 24ಗಂಟೆಯಲ್ಲಿ 3,06,064 ಹೊಸ ಕೊರೊನಾ ಕೇಸ್​ಗಳು ದಾಖಲು; ಪಾಸಿಟಿವಿಟಿ ರೇಟ್ ಏರಿಕೆ, ಚೇತರಿಕೆ ಪ್ರಮಾಣದಲ್ಲಿ ಇಳಿಕೆ