‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು ಗ್ಯಾಂಗ್ ರೇಪ್ಗೆ ಅದಿತಿ ಆಕ್ರೋಶ
Mysore Gang Rape: ‘ಈ ಘಟನೆ ನೋಡಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗುವುದಿಲ್ಲ. ತುಂಬ ಬೇಜಾರಾಗುತ್ತದೆ. ಸಿಟ್ಟು ಬರುತ್ತದೆ. ದುಃಖ ಆಗುತ್ತದೆ’ ಎಂದು ಓಲ್ಡ್ ಮಾಂಕ್ ಸಿನಿಮಾ ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.
ಪದೇಪದೇ ನಡೆಯುತ್ತಿರುವ ಗ್ಯಾಂಗ್ ರೇಪ್ (Gang Rape) ಪ್ರಕರಣಗಳು ಸಮಾಜವನ್ನು ಆತಂಕಕ್ಕೆ ತಳ್ಳುತ್ತಿವೆ. ಈ ಬಗ್ಗೆ ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಖಂಡಿತವಾಗಿಯೂ ಇದೊಂದು ದುರಂತ. ಗ್ಯಾಂಗ್ ರೇಪ್ ಜೊತೆಗೆ ಮಹಿಳೆಯರಿಗೆ ಹಲವು ಬಗೆಯಲ್ಲಿ ಕಿರುಕುಳು ನೀಡುವುದು ನಡೆಯುತ್ತಲೇ ಇದೆ. ಸೆಲೆಬ್ರಿಟಿಯಾದ ನನಗೆ ಜನರು ಮಾಡುವ ಕಮೆಂಟ್ ನೋಡಿದರೆ, ಅವರು ಎದುರು ಬಂದರೆ ನಾನೇನು ಮಾಡುತ್ತೇನೋ ಗೊತ್ತಿಲ್ಲ. ಎಲ್ಲ ಹೆಣ್ಮಕ್ಕಳು ಸ್ಟ್ರಾಂಗ್ ಆಗಬೇಕು. ಅಸಹಾಯಕ ಸ್ಥಿತಿಗೆ ತಲುಪಿದ್ದೇವೆ ಎಂಬ ಬೇಸರ ಆಗುತ್ತದೆ’ ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.
‘ಒಬ್ಬರು ಕೆಟ್ಟ ಮಾತು ಆಡಿದಾಗ ಅದನ್ನು ನೂರಾರು ಜನರು ವಿರೋಧಿಸಬೇಕು. ಅಲ್ಲಿಂದ ನಿಧಾನವಾಗಿ ನಮ್ಮ ಸಮಾಜವನ್ನು ತಿದ್ದಬೇಕು. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಕೆಟ್ಟುಹೋಗುತ್ತದೆ. ಇಂದು ಬೇರೆಯವರ ತಾಯಿ-ತಂಗಿಗೆ ಆಗಿರುವುದು ನಾಳೆ ನಮ್ಮ-ನಿಮ್ಮ ತಾಯಿ-ತಂಗಿಯರಿಗೆ ಆಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಸಂಸ್ಕಾರದಿಂದ ವರ್ತನೆ ಮಾಡುವುದನ್ನು ಕಲಿಯಬೇಕು’ ಎಂದು ಅದಿತಿ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್ ಮಾಂಕ್’ ಟ್ರೇಲರ್; ಇದರಲ್ಲಿದೆ ಹತ್ತಾರು ವಿಶೇಷತೆ
ಆಟೋ ಹತ್ತಿದ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್.. ಕೃತ್ಯ ಎಸಗಿ ರಸ್ತೆ ಬದಿ ಬೆತ್ತಲೆ ಬಿಸಾಡಿ ಹೋದ ಕೀಚಕರು