ಆಗಸ್ಟ್ 15 ರಂದು ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ: ಜಮೀರ್ ಅಹ್ಮದ್

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 08, 2022 | 2:15 PM

ಸ್ಥಳೀಯ ನಾಯಕರೊಂದಿಗೆ ಆಗಸ್ಟ್ 10 ರಂದು ಒಂದು ಸಭೆಯನ್ನು ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಶಾಸಕರು ಹೇಳಿದರು.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಸೋಮವಾರ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತಾಡಿದರು. ಈ ಬಾರಿಯ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು (Independence Day) ಈದ್ಗಾ ಮೈದಾನದಲ್ಲಿ (Eidgah Maidan) ತಿರಂಗ ಹಾರಿಸುವುದಾಗಿ ಜಮೀರ್ ಹೇಳಿದರು. ಸ್ಥಳೀಯ ನಾಯಕರೊಂದಿಗೆ ಆಗಸ್ಟ್ 10 ರಂದು ಒಂದು ಸಭೆಯನ್ನು ನಡೆಸಿ ಕಾರ್ಯಕ್ರಮದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಶಾಸಕರು ಹೇಳಿದರು.

Loading...
Unable to load recommendations.
Follow Us
TV9 Web

TV9 Kannada

Read More