Assembly Session: ಸದನದೊಳ್ ಶಾಸಕರಿಲ್ಲವಯ್ಯ! ಜವಾಬ್ದಾರಿಗಳನ್ನು ಮರೆತ ಆಡಳಿತ ಮತ್ತು ವಿರೋಧ ಪಕ್ಷಗಳ ಜನ ಪ್ರತಿನಿಧಿಗಳು!

Assembly Session: ಸದನದೊಳ್ ಶಾಸಕರಿಲ್ಲವಯ್ಯ! ಜವಾಬ್ದಾರಿಗಳನ್ನು ಮರೆತ ಆಡಳಿತ ಮತ್ತು ವಿರೋಧ ಪಕ್ಷಗಳ ಜನ ಪ್ರತಿನಿಧಿಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 21, 2023 | 1:51 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಶಾಸಕರನ್ನು ಗದರಿ ಸದನದ ದಾರಿಗೆ ತರುವ ಜರೂರು ಅಗತ್ಯವಿದೆ.

ಬೆಂಗಳೂರು: ಇವತ್ತು 16 ನೇ ವಿಧಾನ ಸಭಾ ಮೊದಲ ಅಧಿವೇಶನದ (Assembly Session) ಕೊನೆಯ ದಿನ. ಹಾಗೆ ನೋಡಿದರೆ, ಸದನ ಸದಸ್ಯರಿಂದ ತುಂಬಿ ತುಳುಕಬೇಕಿತ್ತು. ಆದರೆ ಹೇಗಿದೆ ನೋಡಿ ಕೆಳಮನೆ. ಮೇಲ್ಮನೆಯ ಸ್ಥಿತಿ ಭಿನ್ನವಾಗೇನೂ ಇಲ್ಲ. ಅಲ್ಲೊಬ್ಬ ಇಲ್ಲೊಬ್ಬ ಸದಸ್ಯ ಕಾಣುತ್ತಾರೆ. ನಮಗೆಲ್ಲ ಗೊತ್ತಿರುವಂತೆ, ಅಧಿವೇಶನ ನಡೆಯುವಾಗ ದಿಮವೊಂದಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಸದನದಲ್ಲಿ ವಿಷಯಗಳ, ಸಮಸ್ಯೆಗಳ ಚರ್ಚೆಯಾದರೆ ಹಣ ಖರ್ಚಾಗಿದ್ದಕ್ಕೆ ವ್ಯಥೆ ಅನಿಸದು. ವಿರೋಧ ಪಕ್ಷಗಳಾದ ಬಿಜೆಪಿ ಮತ್ತ ಜೆಡಿಎಸ್ ಶಾಸಕರು ವಿಧಾನ ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಆಡಳಿತ ಪಕ್ಷದ ನಾಯಕರೆಲ್ಲಿ ಸ್ವಾಮಿ? ಗೆದ್ದಿದ್ದೇವೆ, ಮುಂದಿನ 5 ವರ್ಷಗಳ ಕಾಲ ನಮ್ಮನ್ನು ಪ್ರಶ್ನಿಸುವರು ಯಾರೂ ಇಲ್ಲ ಎಂಬ ಧೋರಣೆ ಅವರಲ್ಲಿರುವಂತಿದೆ. ಬೆಂಗಳೂರು ಸುತ್ತಿ, ಸಿನಿಮಾ ವೀಕ್ಷಿಸಿ, ಸಾರಿಗೆ, ಊಟ, ವಸತಿ ಮತ್ತು ಅಧಿವೇಶನದ ಭತ್ಯೆಗಳನ್ನು ಪಡೆದ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋದರಾಯ್ತು ಅಂತ ಅವರು ಭಾವಿಸಿದ್ದರೆ ಅದಕ್ಕಿಂತ ದುರುಂತ ಮತ್ತೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಶಾಸಕರನ್ನು ಗದರಿ ಸದನದ ದಾರಿಗೆ ತರುವ ಜರೂರು ಅಗತ್ಯವಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ