ಬಿಜೆಪಿ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಚರ್ಚೆ ಮುಂದೆ ಶುರುವಾಗಲಿದೆ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Oct 21, 2024 | 2:03 PM

ಪ್ರಧಾನಿ ನರೇಂದ್ರ ಮೋದಿಯವರ ನಂತರ ವಂಶವಾದದ ವಿರುದ್ಧ ಅತಿಹೆಚ್ಚು ಮಾತಾಡುವವನು ತಾನೇ ಎನ್ನುವ ಬಸನಗೌಡ ಯತ್ನಾಳ್ ಶಿಗ್ಗಾವಿ ಅಸೆಂಬ್ಲಿ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡುವ ಬಗ್ಗೆ ಕೇಳಿದಾಗ ಅಲ್ಲಿ ಯೋಗ್ಯ ಕ್ಯಾಂಡಿಡೇಟೇ ಇಲ್ಲ, ಏನು ಮಾಡೋದು ಅಂತ ರಕ್ಷಣಾತ್ಮಕ ಧೋರಣೆ ತಳೆಯುತ್ತಾರೆ.

ಕಲಬುರಗಿ: ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾಯಿಸುವರೆಗೆ ವಿಶ್ರಮಿಸುವುದಿಲ್ಲ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸಲು ತಡಬಡಾಯಿಸಿ ನಿರುತ್ತರರಾಗುತ್ತಾರೆ. ನಂತರ ಸಾವರಿಸಿಕೊಂಡು, ರಾಷ್ಟ್ರೀಯ ಅಧ್ಯಕ್ಷನಾಗಿ ಜೆಪಿ ನಡ್ಡಾ ಅವಧಿ ಮುಗಿದಿದೆ, ಹೊಸ ಅಧ್ಯಕ್ಷನ ಚುನಾವಣೆ ಇಷ್ಟರಲ್ಲೇ ನಡೆಯಲಿದೆ, ಅವರು ಅಧಿಕಾರವಹಿಸಿಕೊಂಡ ಬಳಿಕ ರಾಜ್ಯಾಧ್ಯಕ್ಷನನ್ನು ಬದಲಾಯಿಸುವ ಚರ್ಚೆ ಮುಂದುವರಿಯಲಿದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಸೀದಿ ಮುಂದೆ ಡ್ಯಾನ್ಸ್ ಮಾಡಬಾರದು ಎಂದರೆ ಪಾಕಿಸ್ತಾನ, ಬಾಂಗ್ಲಾಕ್ಕೆ ಹೋಗಲಿ; ಬಸನಗೌಡ ಯತ್ನಾಳ್ ವಾಗ್ದಾಳಿ

Follow us on