‘ಒಂದು ಸರಳ ಪ್ರೇಮ ಕಥೆ’ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ಕೊಟ್ಟ ಸಿಂಪಲ್ ಸುನಿ

Updated on: Mar 05, 2024 | 11:25 AM

ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಸೂಪರ್ ಹಿಟ್ ಆಯಿತು. ವಿನಯ್ ರಾಜ್​ಕುಮಾರ್ ಹೀರೋ ಆಗಿ ನಟಿಸಿದ ಈ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ ಸುನಿ.

ನಿರ್ದೇಶಕ ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ (Ondu Sarala Premakathe Movie) ಸೂಪರ್ ಹಿಟ್ ಆಯಿತು. ವಿನಯ್ ರಾಜ್​ಕುಮಾರ್ ಹೀರೋ ಆಗಿ ನಟಿಸಿದ ಈ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ ಸುನಿ. ‘ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗೆ ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್​ನಲ್ಲೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ’ ಎಂದು ಹೇಳಿದ್ದಾರೆ ಸುನಿ. ಸದ್ಯ ಸಿನಿಮಾ ರಿಲೀಸ್ ಆಗಿ 25 ದಿನಗಳು ಕಳೆದಿವೆ. 50ನೇ ದಿನಕ್ಕೆ ಚಿತ್ರವನ್ನು ಒಟಿಟಿಯಲ್ಲಿ ತರೋ ಆಲೋಚನೆ ಚಿತ್ರ ತಂಡಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More